Saturday, October 31, 2009

ಸಮ್ಮಿಲನ...

ಹೂಗಂಧದ ಪರಿಮಳದಿ
ಮುಂಜಾವಿನ ಪರಿಸರದಿ
ತಂಗಾಳಿ ಆವರಿಸಿ, ಮನವನ್ನು ಶೃಂಗರಿಸಿ
ತಾಯಿ ನಿನ್ನ ಮಡಿಲಲಿ ಅರಳುತಿದೆ
ಈ ಕವನ
ಮೂಡುತಿವೆ ಬಣ್ಣಗಳು ಆಕಾಶದಿ ಹಲವಾರು
ಹಾರುತಿವೆ ಹಕ್ಕಿಗಳು ಬಾನೆತ್ತರದಿ ನೂರಾರು
ಅರಳುತಿವೆ ಕನಸುಗಳು ಮನದಾಳದಿ ಸಾವಿರಾರು
ಕಾಯುವುದು ಈ ಲೋಕ
ಆ ರವಿಯ ಬರುವಿಕೆಗೆ
ಪ್ರತಿಭೆ ತುಂಬಿದ ಹೃದಯಗಳ ಹಿಡಿದು
ಮನಸನ್ನು ನಿರ್ಮಲಗೊಳಿಸುವೆ ನೀ ತಾಯೆ
ನಿನ್ನಂತೆ ನಡೆಯುವೆವು ನಮ್ಮನ್ನು ಕಾಯೆ
ಪ್ರಕೃತಿಯ ಓ ಮಾತೆ ಶರಣಾದೆ ನಿನಗೆ
ದೇಹಕ್ಕೆ ಉಸಿರಾಗಿ ನಡೆಸುವೆ ನೀ ಮುಂದೆ
ನಿನಗೆದುರಾಗಿ ನಿಂತರೆ ನಾವೆಲ್ಲಾ ಹಿಂದೆ
ಮಿತಿ ಮೀರಿ ನಡೆದರೆ ಮರಣ ಒಂದೇ.
- ವಾಸು (ಅಂತಿಮ ಬಿ.ಎ, ಪತ್ರಿಕೋದ್ಯಮ)

Saturday, September 19, 2009

ನಮ್ಮ ಸ್ಟುಡಿಯೋಕ್ಕೆ ಬಂದ ಅಧ್ಯಯನ ತಂಡ

ಸುರತ್ಕಲ್: ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ'ದ ವೀಕ್ಷಣೆಗೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ ತಂಡ ಸೆ.19 ಶನಿವಾರ ಭೇಟಿನೀಡಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕುರಿಯನ್ ಈ ಸಂದರ್ಭ ಉಪಸ್ಥಿತರಿದ್ದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಸಿ.ಎಚ್, ಉಪನ್ಯಾಸಕ ಹರೀಶ್ ಕೆ. ಆದೂರು, ಸೂಕ್ತ ಮಾಹಿತಿಗಳನ್ನು ತಿಳಿಸಿದರು.48 ಮಂದಿ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದು ಸೂಕ್ತ ಮಾಹಿತಿ ವಿನಿಮಯ ನಡೆಸಿದರು.






ಅಧ್ಯಯನ ತಂಡಕ್ಕೆ ಸೂಕ್ತ ವಿವರಣೆ ನೀಡುತ್ತಿರುವ ವಿಭಾಗ ಮುಖ್ಯಸ್ಥೆ ಅಕ್ಷತಾ ಭಟ್ ಸಿ.ಎಚ್.

Monday, September 14, 2009

ಪತ್ರಿಕೋದ್ಯಮ ವಿಭಾಗದ ನೂತನ ಸ್ಟುಡಿಯೋ ಅನಾವರಣ


ಗೋವಿಂದ ದಾಸ ಕಾಲೇಜು ಸುರತ್ಕಲ್ ಸುರತ್ಕಲ್ : ಶಿಕ್ಷಣ ಇವತ್ತು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದ ಮಹತ್ವ ಕುಂದುತ್ತಿದೆ ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಇದರ ಸಹಾಯಕ ಪ್ರೋಫೆಸರ್ ಡಾ. ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು. ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ' ಉದ್ಘಾಟಿಸಿ ಅವರು ಮಾತನಾಡಿದರು.





ಶಿಕ್ಷಣ, ಮಾಹಿತಿಗಳನ್ನು ಜನತೆಗೆ ನೀಡುವ ದೂರದರ್ಶನ ಇಂದು ಕೇವಲ ಮನೋರಂಜನೆಗೆ ಸೀಮಿತವಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ರಚಿಸಿದ ಇ - ಪತ್ರಿಕೆ `ವಿದ್ಯಾದರ್ಪಣ.ಬ್ಲಾಗ್ ಸ್ಪಾಟ್ . ಕಾಮ್.'ನ್ನು ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಎಂ.ಎಸ್.ಕೃಷ್ಣ ಭಟ್ ಅನಾವರಣಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ರಾಜ್ ಮೋಹನ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧ್ಯಮ ಮತ್ತು ನೀತಿಸಂಹಿತೆ ಕುರಿತು ವರದೇಶ್ ಹಿರೇಗಂಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಭಟ್ ಸಿ.ಎಚ್. ಸ್ವಾಗತಿಸಿದರು. ಉಪನ್ಯಾಸಕ ಹರೀಶ್ ಕೆ.ಆದೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಅಪೂರ್ವ ತಾಳೆಗರಿ ಹಾಗೂ ಹಳೆಯ ಪತ್ರಿಕೆಗಳ ಪ್ರದರ್ಶನ ನಡೆಯಿತು.

Wednesday, September 9, 2009

ನೀವು ಬರ್ತೀರಲ್ವಾ...


ಸ್ಟುಡಿಯೋ ಸೇರ್ಪಡೆ...

ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಇದೀಗ ಹೊಸ ಸ್ಪೂರ್ತಿಯಾಗಿ ಸುಸಜ್ಜಿತ ಸ್ಟುಡಿಯೋ ಒಂದು ಸೇರ್ಪಡೆಗೊಂಡಿದೆ. ನಾಲ್ಕು ಕಂಪ್ಯೂಟರ್, ಎಡಿಟಿಂಗ್ ಕಂಪ್ಯೂಟರ್, ವಿಡಿಯೋ ರೆಕಾರ್ಡಿಂಗ್, ವಾಯ್ಸ್ ರೆಕಾರ್ಡಿಂಗ್,ಪ್ಯಾನೆಲ್ ಡಿಸ್ಕಶನ್, ಡಾಕ್ಯುಮೆಂಟರಿ, ಹೀಗೆ ಹಲವು ವಿಚಾರಗಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಸ್ಟುಡಿಯೋ ನಿರ್ಮಿಸಲಾಗಿದೆ.
ವಾಯ್ಸ್ ರೆಕಾರ್ಡಿಂಗ್


ಹೊಂಬೆಳಕು...

`ಹೊಂಬೆಳಕು' ಇದು ಭಿತ್ತಿ ಪತ್ರಿಕೆ. ಇದು ವಿದ್ಯಾರ್ಥಿಗಳಲ್ಲಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆ. ಹೊಸ ಹೊಸ ಪುಟ ವಿನ್ಯಾಸ, ಆಕರ್ಷಕ ಶೀರ್ಷಿಕೆ, ರಂಗು ರಂಗಿನ ಹೂರಣಗಳೊಂದಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ಹೊರತರುತ್ತಿದ್ದಾರೆ.

ವಿದ್ಯಾದರ್ಪಣ

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾರಂಭಗೊಂಡ `ವಿದ್ಯಾ ದರ್ಪಣ' ಇದೀಗ ನಾಲ್ಕನೇ ವರ್ಷಕ್ಕೆ ಮುಂದಡಿಯಿಡುತ್ತಿದೆ.