Wednesday, December 17, 2008

20ರಂದು ವ್ಯಾಸಪಥ ಬಿಡುಗಡೆ

ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

Friday, October 3, 2008
















































































ನೃತ್ಯ ಸಿಂಗಾರ: ಫಲಿತಾಂಶ ವಿವರ

ಸುರತ್ಕಲ್, ಅ.3-ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ರ ಕ್ರಿಯೆಟಿವ್ ಡ್ಯಾನ್ಸ್ ಕಾಂಪಿಟೀಶನ್ ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಕಾವ್ಯ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.ಮಂಗಳೂರು ಕ್ಯಾಂಪಸ್ನ ಮಧುಸೂದನ್ ದ್ವಿತೀಯ ಹಾಗೂ ಎಸ್.ಡಿ.ಎಂ ಕಾಲೇಜ್ ಆಫ್ ಬ್ಯುಸಿನೆಸ್ ಮೇನೇಜ್ ಮೆಂಟ್ ಮಂಗಳೂರು ಇದರ ಸ್ಮಿತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಶಾಸ್ತ್ರೀಯ ನೃತ್ಯ ಮಂಗಳೂರು ಸಂತ ಆಗ್ನಸ್ ಕಾಲೇಜಿನ ನಿಶಿತಾ ಪ್ರಥಮ, ಆಳ್ವಾಸ್ ಮೂಡಬಿದಿರೆಯ ಮಾಳವಿಕ ದ್ವಿತೀಯ ಹಾಗೂ ಸಂದೇಶ ಲಲಿತಕಲಾ ಕಾಲೇಜು ಬಿಜ್ಜೋಡಿ ಇದರ ನವ್ಯಶ್ರೀ ಮತ್ತು ಉಡುಪಿ ಎಂ.ಜಿ.ಎಂ ಕಾಲೇಜಿನ ಶ್ರೀಪ್ರಜ್ಞಾ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.























Thursday, October 2, 2008

`ಪ್ರಶಸ್ತಿಯೇ ಪ್ರಾಮುಖ್ಯವಲ್ಲ'

`ನೃತ್ಯ ಸಿಂಗಾರ - 2008'


ಸುರತ್ಕಲ್, ಅ.3- ಪ್ರಶಸ್ತಿಯೇ ಪ್ರಾಮುಖ್ಯವಾಗಿರಬಾರದು. ಸೋಲು - ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಎಂಬುದು ಅತ್ಯಂತ ಮುಖ್ಯವಾದುದು ಎಂದು ಹಿರಿಯ ನೃತ್ಯ ಕಲಾವಿದ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಸಾಂಸ್ಕೃತಿಕ ತಂಡವನ್ನು ರೂಪಿಸುವ ದೃಷ್ಠಿಯಿಂದ `ನೃತ್ಯ ಸಿಂಗಾರ' ಆಯೋಜಿಸಲಾಗಿದೆ ಎಂದು ಡಾ.ಕೆ ಚಿನ್ನಪ್ಪ ಗೌಡ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಎಂ.ಎಸ್ ಕೃಷ್ಣ ಭಟ್ ವಹಿಸಿದ್ದರು.ಕಾಲೇಜಿನ ಸಂಚಾಲಕ ವೆಂಕಟ್ರಾವ್, ಉಪನ್ಯಾಸಕ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜ್ ಮೋಹನ್ ರಾವ್ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ದೇವಪ್ಪ ಕುಳಾಯಿ ವಂದಿಸಿದರು.

Friday, August 29, 2008

ಮಕ್ಕಳ ಧ್ವನಿಗೆ ವೈಭವದ ಚಾಲನೆ

ಸುರತ್ಕಲ್, ಆ30- ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ ಆಯೋಜಿಸಲಾದ 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಚಾಲನೆ ನೀಡಿದರು.ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ತಿಗಳಿಂದ ತುಂಬಿದ್ದ ವಿದ್ಯಾದಾಯಿನೀ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣ ಅಕ್ಷರಶಃ ಮಕ್ಕಳ ಧ್ವನಿಗೆ ಸಾಕ್ಷಿಯಾಯಿತು.ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ.ರಮಾನಂದ ಭಟ್ ಆಶೀರ್ವಚನ ನೀಡಿದರು.ಸಮ್ಮೇಳನಾಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಹರಿಕೃಷ್ಣ ಪುನರೂರು ಸ್ಮರಣ ಸಂಚಿಕೆ ಅನಾವರಣ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ ಸುಚರಿತ ಶೆಟ್ಟಿ, ಸಿ.ಚಾಮೇ ಗೌಡ, ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.ವಿಶೇಷ ರೀತಿಯ ಉದ್ಘಾಟನೆಗೆ 15ನೆಯ ಮಕ್ಕಳ ಧ್ವನಿ ಸಾಕ್ಷಿಯಾಯಿತು. ವಿದ್ಯಾರ್ತಿಗಳಿಂದ ಹಚ್ಚೇವು ಕನ್ನಡ ದೀಪ ಹಾಡು ಹಾಡುತ್ತಿದ್ದಂತೆಯೇ ಉದ್ಘಾಟಕರು ದೀಪ ಬೆಳಗಿ ಚಾಲನೆ ನೀಡಿದರು. ಸೇರಿದ್ದ ಸಾಹಿತ್ಯಾಭಿಮಾನಿಗಳ ಕರತಾಡನ ಮೆರುಗು ಹೆಚ್ಚಿಸಿತು.ಸ್ವಾಗತ ಸಮಿತಿ ಪಿ.ಕೃಷ್ಣ ಮೂತರ್ಿ ಸ್ವಾಗತಿಸಿದರು. ಬಿ.ಶ್ರೀನಿವಾಸ್ ರಾವ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಾಮನ ಇಡ್ಯಾ ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಗೀತ ಗಾಯನ ಕುಂಚ ನರ್ತನ ಕಾರ್ಯಕ್ರಮ ನಡೆಯಿತು.


ಅವಿಸ್ಮರಣೀಯ ಅನುಭವ : ಮಂಜುನಾಥ ಹೆಗಡೆ

ಸುರತ್ಕಲ್, ಆ.30- `15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಪಟ್ಟ ನನಗೆ ಸಿಕ್ಕಿದ್ದು ನನ್ನ ಭಾಗ್ಯ . ಇದೊಂದು ಅವಿಸ್ಮರಣೀಯ ಅನುಭವ' ಹೀಗೆಂದವರು 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಮೂಡಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ತಿ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ.`ಹೊಂಗಿರಣ' ವೆಬ್ ಸೈಟ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.ಭ್ರಮೆ ಬೇಡ, ನಿಜವಾದ ಕ್ರಿಯೆ ಬೇಕು. ಸಾಹಿತ್ಯವನ್ನು ಜನ ಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕು, ಈ ನಿಟ್ಟಿನಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.ಇದೊಂದು ಅಪೂರ್ವ ಅವಕಾಶ ನನಗೆ ಒದಗಿ ಬಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ಒಂದು ವಿಶ್ವಾಸ ನನಗಿದೆ.ಪ್ರತಿಯೊಬ್ಬ ವಿದ್ಯಾರ್ತಿಯಲ್ಲೂ ಪ್ರತಿಭೆ ಇದ್ದೇ ಇದೆ. ಇದನ್ನು ಪ್ರಚುರ ಪಡಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಮಕ್ಕಳ ಧ್ವನಿ ಪೂರಕ ಎಂದರು.


`ಸಾಹಿತ್ಯ ಅಂತರಾಳದ ಸಂಗೀತ'

ಸುರತ್ಕಲ್, ಆ.30- ಸಾಹಿತ್ಯ ಭಾವನೆಗಳ ಪ್ರವಾಹ. ಅಂತರಾಳದ ಸಂಗೀತ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಅನಿವಾರ್ಯ . ಒಬ್ಬ ವ್ಯಕ್ತಿಯನ್ನು ರೂಪಿಸಬಲ್ಲ, ಬೆಳೆಸಬಲ್ಲ ಅಪೂರ್ವ ಶಕ್ತಿ ಸಾಹಿತ್ಯಕ್ಕಿದೆ ಎಂದು 15ನೇ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಹೇಳಿದರು.ಸಾಹಿತ್ಯ ವ್ಯಕ್ತಿಯನ್ನು ಪ್ರಜ್ಞಾವಂತ ನಾಗರಿಕನನ್ನಾಗಿ ರೂಪಿಸುತ್ತದೆ. ವಿಷಯವೊಂದನ್ನು ಸಾವಿರ ಕೋನಗಳಲ್ಲಿ ವಿಮಶರ್ಿಸಬಲ್ಲ ಯುವ ಮನಸ್ಸು ಪ್ರಜ್ಞಾಶೀಲವಾಗುವುದರ ಜೊತೆಗೆ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.ದುಃಖವನ್ನು ನುಂಗಿಕೊಂಡು ಸುಖವನ್ನು ಜನರಿಗೆ ಹಂಚುವುದೇ ನಿಜವಾದ ಸಾಹಿತ್ಯ ಎಂದು ಅವರು ವಿಶ್ಲೇಷಿಸಿದರು.ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆಯ ಅಭಿವ್ಯಕ್ತಿಗೆ ಸಾಹಿತ್ಯ ಒಂದು ಮಾಧ್ಯಮ. ಆದ್ದರಿಂದ ಸಾಹಿತ್ಯವನ್ನು ಜನಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕಾಗಿದೆ ಎಂದವರು ಹೇಳಿದರು.


ಮಕ್ಕಳ ಧ್ವನಿಗೆ ಹೊಂಬೆಳಕಿನ ಸ್ವಾಗತ

ಸುರತ್ಕಲ್, ಆ.30- ಮಕ್ಕಳ ಧ್ವನಿ ಸಮ್ಮೇಳನಕ್ಕೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ತಿಗಳು `ಹೊಂಬೆಳಕು' ಭಿತ್ತಿ ಪತ್ರಿಕೆಯ ವಿಶೇಷ ಪುರವಣಿಗಳನ್ನು ಹೊರತಂದು ಸರ್ವರ ಪ್ರಶಂಸೆಗೆ ಪಾತ್ರರಾದರು.ಸಮ್ಮೇಳನ ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಉದ್ಘಾಟನಾ ಸಮಾರಂಭವೂ ಸೇರಿದಂತೆ ಸಮ್ಮೇಳನದ ವೈಶಿಷ್ಠ್ಯಪೂರ್ಣ ಮಾಹಿತಿ ನೀಡುವ ಕಾರ್ಯ ಭಿತ್ತಿಪತ್ರಿಕೆಯ ಮೂಲಕ ನಡೆದಿದೆ.