Monday, September 14, 2009

ಪತ್ರಿಕೋದ್ಯಮ ವಿಭಾಗದ ನೂತನ ಸ್ಟುಡಿಯೋ ಅನಾವರಣ


ಗೋವಿಂದ ದಾಸ ಕಾಲೇಜು ಸುರತ್ಕಲ್ ಸುರತ್ಕಲ್ : ಶಿಕ್ಷಣ ಇವತ್ತು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದ ಮಹತ್ವ ಕುಂದುತ್ತಿದೆ ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಇದರ ಸಹಾಯಕ ಪ್ರೋಫೆಸರ್ ಡಾ. ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು. ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ' ಉದ್ಘಾಟಿಸಿ ಅವರು ಮಾತನಾಡಿದರು.





ಶಿಕ್ಷಣ, ಮಾಹಿತಿಗಳನ್ನು ಜನತೆಗೆ ನೀಡುವ ದೂರದರ್ಶನ ಇಂದು ಕೇವಲ ಮನೋರಂಜನೆಗೆ ಸೀಮಿತವಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ರಚಿಸಿದ ಇ - ಪತ್ರಿಕೆ `ವಿದ್ಯಾದರ್ಪಣ.ಬ್ಲಾಗ್ ಸ್ಪಾಟ್ . ಕಾಮ್.'ನ್ನು ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಎಂ.ಎಸ್.ಕೃಷ್ಣ ಭಟ್ ಅನಾವರಣಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ರಾಜ್ ಮೋಹನ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧ್ಯಮ ಮತ್ತು ನೀತಿಸಂಹಿತೆ ಕುರಿತು ವರದೇಶ್ ಹಿರೇಗಂಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಭಟ್ ಸಿ.ಎಚ್. ಸ್ವಾಗತಿಸಿದರು. ಉಪನ್ಯಾಸಕ ಹರೀಶ್ ಕೆ.ಆದೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಅಪೂರ್ವ ತಾಳೆಗರಿ ಹಾಗೂ ಹಳೆಯ ಪತ್ರಿಕೆಗಳ ಪ್ರದರ್ಶನ ನಡೆಯಿತು.

Wednesday, September 9, 2009

ನೀವು ಬರ್ತೀರಲ್ವಾ...


ಸ್ಟುಡಿಯೋ ಸೇರ್ಪಡೆ...

ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಇದೀಗ ಹೊಸ ಸ್ಪೂರ್ತಿಯಾಗಿ ಸುಸಜ್ಜಿತ ಸ್ಟುಡಿಯೋ ಒಂದು ಸೇರ್ಪಡೆಗೊಂಡಿದೆ. ನಾಲ್ಕು ಕಂಪ್ಯೂಟರ್, ಎಡಿಟಿಂಗ್ ಕಂಪ್ಯೂಟರ್, ವಿಡಿಯೋ ರೆಕಾರ್ಡಿಂಗ್, ವಾಯ್ಸ್ ರೆಕಾರ್ಡಿಂಗ್,ಪ್ಯಾನೆಲ್ ಡಿಸ್ಕಶನ್, ಡಾಕ್ಯುಮೆಂಟರಿ, ಹೀಗೆ ಹಲವು ವಿಚಾರಗಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಸ್ಟುಡಿಯೋ ನಿರ್ಮಿಸಲಾಗಿದೆ.
ವಾಯ್ಸ್ ರೆಕಾರ್ಡಿಂಗ್


ಹೊಂಬೆಳಕು...

`ಹೊಂಬೆಳಕು' ಇದು ಭಿತ್ತಿ ಪತ್ರಿಕೆ. ಇದು ವಿದ್ಯಾರ್ಥಿಗಳಲ್ಲಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆ. ಹೊಸ ಹೊಸ ಪುಟ ವಿನ್ಯಾಸ, ಆಕರ್ಷಕ ಶೀರ್ಷಿಕೆ, ರಂಗು ರಂಗಿನ ಹೂರಣಗಳೊಂದಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ಹೊರತರುತ್ತಿದ್ದಾರೆ.

ವಿದ್ಯಾದರ್ಪಣ

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾರಂಭಗೊಂಡ `ವಿದ್ಯಾ ದರ್ಪಣ' ಇದೀಗ ನಾಲ್ಕನೇ ವರ್ಷಕ್ಕೆ ಮುಂದಡಿಯಿಡುತ್ತಿದೆ.

Tuesday, July 21, 2009

ಗೋವಿಂದ ದಾಸ ಕಾಲೇಜಿಗೆ ಹೊಸ ಸೇರ್ಪಡೆ

ಮಂಗಳೂರು: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಇತಿಹಾಸದಲ್ಲಿ ಹೊಸತೊಂದು ದಾಖಲೆ ನಿರ್ಮಾಣವಾಗುತ್ತಿದೆ. ಇಲ್ಲಿನ ಪತ್ರಿಕೋದ್ಯಮ ವಿಭಾಗಕ್ಕೆ ಸಮರ್ಪಕವಾದ ರೆಕಾರ್ಡಿಂಗ್ ಸ್ಟುಡಿಯೋ ಒಂದು ಇದೀಗ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಸದ್ಯವೇ ಇದು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಲಿವೆ.


ಆಧುನಿಕ ವಿಡಿಯೋ ಕ್ಯಾಮರಾ, ಸೌಂಡ್ ಮಿಕ್ಸರ್, ರೆಕಾರ್ಡಿಂಗ್ ರೂಂ, ಎಡಿಟಿಂಗ್ ರೂಂ, ವಿದ್ಯಾರ್ಥಿಗಳಿಗೆ ಸೂಕ್ತ ಕಂಪ್ಯೂಟರ್ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳನ್ನು ಈ ಸ್ಟುಡಿಯೋ ಹೊಂದಿದೆ. ಈಗಾಗಲೇ ವಿದ್ಯಾರ್ಥಿಗಳ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತವಾದ ಅವಕಾಶ ನೀಡುವ ಉದ್ದೇಶದಿಂದ `ಹೊಂಗಿರಣ' ಅಂತರ್ಜಾಲ ತಾಣ, ವಿದ್ಯಾ ದರ್ಪಣ ಎಂಬ ಮುದ್ರಣ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ.

Wednesday, December 17, 2008

20ರಂದು ವ್ಯಾಸಪಥ ಬಿಡುಗಡೆ

ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.