
Saturday, September 19, 2009
ನಮ್ಮ ಸ್ಟುಡಿಯೋಕ್ಕೆ ಬಂದ ಅಧ್ಯಯನ ತಂಡ
ಸುರತ್ಕಲ್: ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ'ದ ವೀಕ್ಷಣೆಗೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ ತಂಡ ಸೆ.19 ಶನಿವಾರ ಭೇಟಿನೀಡಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕುರಿಯನ್ ಈ ಸಂದರ್ಭ ಉಪಸ್ಥಿತರಿದ್ದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಸಿ.ಎಚ್, ಉಪನ್ಯಾಸಕ ಹರೀಶ್ ಕೆ. ಆದೂರು, ಸೂಕ್ತ ಮಾಹಿತಿಗಳನ್ನು ತಿಳಿಸಿದರು.48 ಮಂದಿ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದು ಸೂಕ್ತ ಮಾಹಿತಿ ವಿನಿಮಯ ನಡೆಸಿದರು.


Monday, September 14, 2009
ಪತ್ರಿಕೋದ್ಯಮ ವಿಭಾಗದ ನೂತನ ಸ್ಟುಡಿಯೋ ಅನಾವರಣ

ಗೋವಿಂದ ದಾಸ ಕಾಲೇಜು ಸುರತ್ಕಲ್ ಸುರತ್ಕಲ್ : ಶಿಕ್ಷಣ ಇವತ್ತು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದ ಮಹತ್ವ ಕುಂದುತ್ತಿದೆ ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಇದರ ಸಹಾಯಕ ಪ್ರೋಫೆಸರ್ ಡಾ. ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು. ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ' ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಣ, ಮಾಹಿತಿಗಳನ್ನು ಜನತೆಗೆ ನೀಡುವ ದೂರದರ್ಶನ ಇಂದು ಕೇವಲ ಮನೋರಂಜನೆಗೆ ಸೀಮಿತವಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ರಚಿಸಿದ ಇ - ಪತ್ರಿಕೆ `ವಿದ್ಯಾದರ್ಪಣ.ಬ್ಲಾಗ್ ಸ್ಪಾಟ್ . ಕಾಮ್.'ನ್ನು ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಎಂ.ಎಸ್.ಕೃಷ್ಣ ಭಟ್ ಅನಾವರಣಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ರಾಜ್ ಮೋಹನ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧ್ಯಮ ಮತ್ತು ನೀತಿಸಂಹಿತೆ ಕುರಿತು ವರದೇಶ್ ಹಿರೇಗಂಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಭಟ್ ಸಿ.ಎಚ್. ಸ್ವಾಗತಿಸಿದರು. ಉಪನ್ಯಾಸಕ ಹರೀಶ್ ಕೆ.ಆದೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಅಪೂರ್ವ ತಾಳೆಗರಿ ಹಾಗೂ ಹಳೆಯ ಪತ್ರಿಕೆಗಳ ಪ್ರದರ್ಶನ ನಡೆಯಿತು.
Wednesday, September 9, 2009
ಸ್ಟುಡಿಯೋ ಸೇರ್ಪಡೆ...
ಹೊಂಬೆಳಕು...
ವಿದ್ಯಾದರ್ಪಣ
Tuesday, July 21, 2009
ಗೋವಿಂದ ದಾಸ ಕಾಲೇಜಿಗೆ ಹೊಸ ಸೇರ್ಪಡೆ
ಮಂಗಳೂರು: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಇತಿಹಾಸದಲ್ಲಿ ಹೊಸತೊಂದು ದಾಖಲೆ ನಿರ್ಮಾಣವಾಗುತ್ತಿದೆ. ಇಲ್ಲಿನ ಪತ್ರಿಕೋದ್ಯಮ ವಿಭಾಗಕ್ಕೆ ಸಮರ್ಪಕವಾದ ರೆಕಾರ್ಡಿಂಗ್ ಸ್ಟುಡಿಯೋ ಒಂದು ಇದೀಗ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಸದ್ಯವೇ ಇದು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಲಿವೆ.
ಆಧುನಿಕ ವಿಡಿಯೋ ಕ್ಯಾಮರಾ, ಸೌಂಡ್ ಮಿಕ್ಸರ್, ರೆಕಾರ್ಡಿಂಗ್ ರೂಂ, ಎಡಿಟಿಂಗ್ ರೂಂ, ವಿದ್ಯಾರ್ಥಿಗಳಿಗೆ ಸೂಕ್ತ ಕಂಪ್ಯೂಟರ್ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳನ್ನು ಈ ಸ್ಟುಡಿಯೋ ಹೊಂದಿದೆ. ಈಗಾಗಲೇ ವಿದ್ಯಾರ್ಥಿಗಳ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತವಾದ ಅವಕಾಶ ನೀಡುವ ಉದ್ದೇಶದಿಂದ `ಹೊಂಗಿರಣ' ಅಂತರ್ಜಾಲ ತಾಣ, ವಿದ್ಯಾ ದರ್ಪಣ ಎಂಬ ಮುದ್ರಣ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ.
ಆಧುನಿಕ ವಿಡಿಯೋ ಕ್ಯಾಮರಾ, ಸೌಂಡ್ ಮಿಕ್ಸರ್, ರೆಕಾರ್ಡಿಂಗ್ ರೂಂ, ಎಡಿಟಿಂಗ್ ರೂಂ, ವಿದ್ಯಾರ್ಥಿಗಳಿಗೆ ಸೂಕ್ತ ಕಂಪ್ಯೂಟರ್ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳನ್ನು ಈ ಸ್ಟುಡಿಯೋ ಹೊಂದಿದೆ. ಈಗಾಗಲೇ ವಿದ್ಯಾರ್ಥಿಗಳ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತವಾದ ಅವಕಾಶ ನೀಡುವ ಉದ್ದೇಶದಿಂದ `ಹೊಂಗಿರಣ' ಅಂತರ್ಜಾಲ ತಾಣ, ವಿದ್ಯಾ ದರ್ಪಣ ಎಂಬ ಮುದ್ರಣ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ.
Subscribe to:
Posts (Atom)










