Saturday, July 12, 2008

ನುಡಿಚಿತ್ರ

ಇವರ

ಭವಿಷ್ಯ..?

ಹೊ ಟ್ಟೆತುಂಬಾ ಕೂಳಿಲ್ಲ. ತಲೆ ಮೇಲೆ ಸೂರಿಲ್ಲ. ಹಗಲು ಜನ ನಡೆದಾಡುವ ಪ್ಲಾಟ್ ಫಾರಂ, ಬಸ್ ಸ್ಟ್ಯಾಂಡ್ಗಳೇ ರಾತ್ರಿ ಇವರ ಬೆಡ್ರೂಂಗಳು!. ಕೈಗಳಲ್ಲಿ ಪಾತ್ರೆಗಳು, ತಲೆಯ ಮೇಲೆ ಬಟ್ಟೆಯ ಗಂಟೊಂದನ್ನು ಹೊತ್ತುಕೊಂಡು ದಿನಕ್ಕೊಂದು ಕಡೆ ಅಲೆದಾಡುವ ಈ ಅಲೆಮಾರಿ ಕೂಲಿಕಾರ್ಮಿಕರಿಗೆ ಭವಿಷ್ಯ ಒಂದು ಪ್ರಶ್ನಾರ್ಥಕ ಚಿಹ್ನೆ...!
ಕ್ಷಿಪ್ರಗತಿಯಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿರುವ ಮಹಾನಗರ ಮಂಗಳೂರು. ಇಲ್ಲಿ ಒಂದೆಡೆ ಮಲ್ಟಿಪ್ಲೆಕ್ಸ್, ಪಬ್ಗಳಲ್ಲಿ ಕಾಲ ಕಳೆಯುವ ಜನರಿದ್ದರೆ, ಮತ್ತೊಂದೆಡೆ ಒಪ್ಪೊತ್ತಿನ ಕೂಳಿಗಾಗಿ ಪರದಾಡುವ ಕೂಲಿ ಕೂಲಿಕಾರ್ಮಿಕರಿದ್ದಾರೆ. ಪುರಭವನದ ಇಕ್ಕೆಲಗಳು, ಹಂಪನಕಟ್ಟೆ, ಮಾಕರ್ೆಟ್, ಕಂಕನಾಡಿ ರೈಲ್ವೇ ಸ್ಟೇಶನ್, ಕೆ.ಎಸ್.ಆರ್.ಟಿ.ಸಿ ಬಸ್ಸ್ಟ್ಯಾಂಡ್ ಹೀಗೆ ನಗರದ ಪ್ರಮುಖ ಭಾಗಗಳಲ್ಲಿ ಗುಂಪಾಗಿ ಜೀವಿಸುವ ಕೂಲಿ ಕಾಮರ್ಿಕರದ್ದು ಅಲೆಮಾರಿ ಜೀವನ.
ನವಜಾತ ಶಿಶುವಿನಿಂದ ಹಿಡಿದು, ವೃದ್ಧರ ವರೆಗೆ ಎಲ್ಲಾ ವಯಸ್ಸಿನವರನ್ನು ಒಳಗೊಂಡಿರುವ ಅಲೆಮಾರಿ ಕೂಲಿಕಾರ್ಮಿಕರ ಗುಂಪುಗಳು ಮೂಲತಃ ಇಲ್ಲಿನವಲ್ಲ. ಬಡತನದಿಂದ ಬಸವಳಿದ ಇವರು ಜೀವನ ನಿರ್ವಹಣೆಗಾಗಿ ವಿಜಾಪುರ, ಗದಗ, ಗುಲ್ಬರ್ಗ,ಧಾರಾವಾಡಗಳಂತಹ ದೂರದ ಊರುಗಳಿಂದ ಮಂಗಳೂರನ್ನು ಸೇರಿದ್ದಾರೆ. ಹಣದ ಅಭಾವ, ನೀರಿನ ಕೊರತೆಗಳಿಂದಾಗಿ ಊರಲ್ಲಿದ್ದ ಹೊಲಗಳಲ್ಲಿ ಬೆಳೆ ಬೆಳೆಯಲಾಗದೇ ಮನೆ ಮಠಗಳನ್ನು ತ್ಯಜಿಸಿ ಮಹಾನಗರಕ್ಕಾಗಮಿಸಿದ್ದಾರೆ.
ನಗರವನ್ನು ಸೇರಿದ ಕೂಲಿಕಾರ್ಮಿಕರು ಕಟ್ಟಡ ಕಾಮಗಾರಿ, ಗಾರೆ ಕೆಲಸ, ಜಲ್ಲಿ ಹೊರುವುದು... ಮುಂತಾದವುಗಳನ್ನು ನಿರ್ವಹಿಸಿ ಹಣ ಸಂಪಾದಿಸಿದರೆ, ಅವರ ಮಕ್ಕಳು ಬೀದಿ ಬದಿಗಲ್ಲಿರುವ ಬಸ್ಸ್ಟ್ಯಾಂಡ್ಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದ ಅನಾಥರಂತೆ ನಟಿಸುತ್ತಾ ದಾರಿಹೋಕರನ್ನು ಕಾಡಿ ಬೇಡಿ ಭಿಕ್ಷೆ ಗಿಟ್ಟಿಸಿ ಅಷ್ಟಿಷ್ಟು ಸಂಪಾದಿಸುತ್ತಾರೆ.
ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿರುವ ಈ ಮಕ್ಕಳಿಗೆ ಭಿಕ್ಷೆ ಬೇಡುವ ಕಲೆ ಬಾಲ್ಯದಿಂದಲೇ ಕರಗತ.
ಕಟ್ಟಡ ಕಾಮಗಾರಿ , ಗಾರೆ ಕೆಲಸಗಳಲ್ಲಿ ದಿನವೊಂದಕ್ಕೆ 100ರಿಂದ 200ರು ಸಂಪಾದಿಸುವ ಕೂಲಿಗಳು ಅಷ್ಟರಲ್ಲೇ ತಮ್ಮ ಸಂಸಾರದ ಖರ್ಚು ಭರಿಸಬೇಕು. ಕೈಯಲ್ಲಿ ಕೆಲಸವಿಲ್ಲವೆಂದರೆ ಹೊಟ್ಟೆಯೂ ಬರಿದು. ಇಷ್ಟು ಕಡಿಮೆ ಸಂಬಳದಲ್ಲಿ ಸಂಸಾರದ ಖರ್ಚನ್ನು ಹೇಗೆ ತೂಗಿಸುತ್ತೀರಿ...? ಎಂದು ಪ್ರಶ್ನಿಸಿದರೆ `ಎಲ್ಲರೂ ದುಡಿಯೋಕ್ಕೆ ಹೋಗ್ತೀವಿ...ಎಲ್ಲಾರ್ದು ಸೇರಿದ್ರೆ ಸಾಕಾಗುತ್ತೆ. ನಮ್ ಮಕ್ಳನ್ನೂ ಕೆಲ್ಸಕ್ಕೆ ಕಳಿಸ್ತೀವಿ' ಎನ್ನುತ್ತಾರೆ ಧಾರಾವಾಡದ ಬಸಪ್ಪ.
ರಾತ್ರಿಯ ವೇಳೆ ರಸ್ತೆಯ ಇಕ್ಕೆಲಗಳು, ರೈಲ್ವೇ ಸ್ಟೇಷನ್, ಬಸ್ಟ್ಯಾಂಡ್ , ಕಾಮಗಾರಿ ಮುಗಿಯದ ಕಟ್ಟಡಗಳೇ ಇವರ (ಅರ)ಮನೆಗಳು. ಕಾಮಗಾರಿ ಮುಗಿಯುವ ತನಕ ಅಲ್ಲೇ ಇವರ ವಾಸ. ಇನ್ನು ಕೊರೆವ ಚಳಿ, ಮಳೆಯಲ್ಲೂ ರಸ್ತೆಬದಿಯಲ್ಲಿ ಕಾಲಕಳೆಯಬೇಕಾದಂತಹ ಸ್ಥಿತಿ ಇನ್ನು ಕೆಲವರದ್ದು.
ಬಸ್ಟ್ಯಾಂಡ್ ಸೂರಿನಡಿ ಆಶ್ರಯ ಪಡೆಯೋಣವೆಂದರೆ ರಾತ್ರಿ ಗಸ್ತು ತಿರುಗುವ ಪೋಲೀಸರ ಕಾಟ. ಬೀದಿ ಬದಿಗಳಲ್ಲಿ ಮಲಗಿದರೆ ನಡುರಾತ್ರಿಯವರೆಗೆ ಸಂಚರಿಸುವ ವಾಹನಗಳ ಉಪಟಳ. ಸುರಿವ ಮಳೆಯಿಂದ ರಾತ್ರಿಯಿಡೀ ರಕ್ಷಣೆ ಪಡೆಯಲು ಕೊನೆಗೂ ಇವರ ನೆರವಿಗೆ ಬರುವುದು ರಸ್ತೆ ಬದಿಗಳಲ್ಲಿರುವ ಎಡಿಬಿಯ ಬೃಹದಾಕಾರದ ಸಿಮೆಂಟ್ ಪೈಪುಗಳು. ಕೆಲವೊಮ್ಮೆ ಈ ಗೋಲಾಕಾರದ ಪೈಪುಗಳೇ ಜೋಪಡಿಗಳಾಗಿ ಮಾಪರ್ಾಡಾಗುವುದೂ ಇದೆ. ಆದರೆ ಸರಕಾರಿ ಅಧಿಕಾರಿಗಳ ಕಣ್ಣು ಬಿತ್ತೆಂದರೆ ಈ ಆಸರೆಗೂ ಕುತ್ತು.
ಮಂಗಳೂರಿನಲ್ಲಿ ಕಟ್ಟಡ ನಿಮರ್ಾಣಕ್ಕೆ ಕೂಲಿ ಕಾರ್ಮಿಕರ ಕೊರತೆ ಇದೆ. ಕಟ್ಟಡದ ಕಾಂಟ್ರಾಕ್ಟರ್ಗಳು ಬಿಜಾಪುರ, ಧಾರಾವಾಡಗಳಂತಹ ದೂರದ ಊರುಗಳಿಂದ ಕೂಲಿ ಕಾಮರ್ಿಕರನ್ನು ಇಲ್ಲಿಗೆ ಕರೆಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕಾಂಟ್ರಾಕ್ಟರ್ಗಳನ್ನು ನಂಬಿ ನಗರಕ್ಕೆ ಬಂದ ಕೂಲಿಗಳ ಹೊಟ್ಟೆಗೆ ಮಾತ್ರ ತಣ್ಣೀರ ಬಟ್ಟೆಯೇ ಗತಿ.
ನಗರಕ್ಕೆ ಬಂದರೆ ಒಳ್ಳೆಯ ಸಂಬಳ ಸಿಗುವ ಕೆಲಸ ಕೊಡಿಸುವೆನೆಂಬ ಕಂಟ್ರಾಕ್ಟರ್ಗಳ ಸವಿ ಮಾತಿಗೆ ಮರುಳಾಗುವ ಹಳ್ಳಿಯ ಬಡಜನರು ತಮ್ಮ ಮನೆ ಮಠಗಳನ್ನು ತ್ಯಜಿಸಿ ಹಣದಾಸೆಗೆ ಕೂಲಿಗಳಾಗಿ ನಗರಕ್ಕೆ ಆಗಮಿಸುತ್ತಾರೆ. ಆದರೆ ಕಾಂಟ್ರಾಕ್ಟರ್ಗಳ ನಿಜಮುಖ ಬಯಲಾಗುವಷ್ಟರಲ್ಲಿ ಅವರು ನಿರ್ಗತಿಕರಾಗಿರುತ್ತಾರೆ.
ಒಂದೆಡೆ ಕೆಲಸ ಮಾಡಿಸಿ ಹಣ ಕೊಡದೆ ಸತಾಯಿಸುತ್ತಿರುವ ಕಾಂಟ್ರಾಕ್ಟರ್ಗಳಿದ್ದರೆ, ಮತ್ತೊಂದೆಡೆ ಆರು ತಿಂಗಳು ಕೆಲಸ ಕೊಡುತ್ತೇವೆಂದು ನಂಬಿಸಿ
ಹತ್ತೇ ದಿನಕ್ಕೆ ಕೈ ಕೊಡುವವರಿದ್ದಾರೆ.
ವಾರಕ್ಕೊಮ್ಮೆ ಕೈ ಸೇರುವ ಅಲ್ಪ ಸ್ವಲ್ಪ ಸಂಬಳದಲ್ಲೇ ಕೂಲಿಗಳು ದಿನ ದೂಡಬೇಕು. ಏಕೆ? ಏನು? ಎಂದು ಪ್ರಶ್ನಿಸಿದರೆ ಮರುದಿನವೇ ಗೇಟ್ಪಾಸ್.
ಅಪ್ಪಿ ತಪ್ಪಿ ಕಂಟ್ರಾಕ್ಟರ್ಗಳಿಂದ ಕೆಲಸ ಗಿಟ್ಟಿಸಿಕೊಂಡರೂ ಕೂಲಿಗಳಿಗೆ ಇತರ ಸಮಸ್ಯೆಗಳು ತಪ್ಪಿದ್ದಲ್ಲ. ವಾಸಕ್ಕೆಂದು ನೀಡುವ ಗುಡಿಸಲು ಕರಾಗೃಹಕ್ಕಿಂತಲೂ ಕಠಿಣ. ಕೋಳಿಗೂಡಿನಂತಿರುವ ಗುಡಿಸಲಲ್ಲಿ ಆರೇಳು ಮಂದಿ ವಾಸಿಸಬೇಕು. ಜೋರಾಗಿ ಒಂದು ಮಳೆ ಬಂದರೆ ಜೋಪಡಿ ನೆಲಸಮ.
ಸ್ನಾನ ಗೃಹ , ಶೌಚಾಲಯಗಳ ಮುಖವನ್ನಂತೂ ಇವರು ಜೀವಮಾನದಲ್ಲೇ ಕಂಡೇ ಇಲ್ಲ. ಆರೋಗ್ಯ ಹದಗೆಟ್ಟರೆ ಸರಕಾರಿ ಆಸ್ಪತ್ರೆಯಲ್ಲೂ ಇವರಿಗೆ ಜಾಗ ಇಲ್ಲ.
ಸಾಯಂಕಾಲ ಕೆಲಸ ಮುಗಿದ ಬಳಿಕ ಕಾಮಗಾರಿಗಾಗಿ ತಂದ ಸಿಮೆಂಟ್ ಮಿಶ್ರಿತ ಮಣ್ಣು ನೀರಿನಲ್ಲೇ ಕೂಲಿಗಳ ಅಭ್ಯಂಜನ. ಕೈಗೆ ಸಿಕ್ಕ ಪುಡಿಗಾಸಿನಲ್ಲಿ ನಾಳೆಗಳನ್ನು ಹೇಗೆ ಕಳೆಯುವುದು ಎಂದು ಕೆಲವರು ಯೋಚಿಸಿದರೆ, ಇನ್ನು ಕೆಲವು ಮದಿರಾ ಪ್ರಿಯರು ಕಂಠಮಟ್ಟ ಕುಡಿದು `ಸ್ವಪ್ನ ಲೋಕದಲ್ಲಿ ' ವಿಹರಿಸುತ್ತಿರುತ್ತಾರೆ. ರಾತ್ರಿ ಬೀದಿ ಬದಿಯ ನಿಯಾನ್ ದೀಪದಡಿ ಸ್ಟೌ, ಪಾತ್ರೆಗಳನ್ನಿಟ್ಟು ಗುಂಪಾಗಿ ಅಡುಗೆ ಮಾಡುವುದೆಂದರೆ ಇವರಿಗೆ ಎಲ್ಲಿಲ್ಲದ ಸಂಭ್ರಮ.
ಭವಿಷ್ಯದ ಅನಿಶ್ಚಿತತೆಯ ನಡುವೆಯೂ ನಾಳಿನ ಬಗ್ಗೆ ಚಿಂತಿಸದೆ, ಕಷ್ಟಗಳಿಗೆ ಎದೆಗುಂದದೇ ಜೀವನ ಸಾಗಿಸುವ ಕೂಲಿ ಕಾಮರ್ಿಕರ ಧೈರ್ಯ ಮೆಚ್ಚಬೇಕಾದದ್ದೇ. ಬಡತನ ನಿಮರ್ೂಲನೆ, ಸಂಪೂರ್ಣ ಸಾಕ್ಷರತೆ, ಉದ್ಯೋಗ ಖಾತರಿ ಯೋಜನೆ...ಹೀಗೆ ಒಂದಾದ ಮೇಲೊಂದು ಯೋಜನೆಗಳನ್ನು ಹಮ್ಮಿಕೊಂಡು, ಪ್ರಚಾರ ಗಿಟ್ಟಿಸುವ ಸರಕಾರ ಈ ಕೂಲಿ ಕಾಮರ್ಿಕರ ಕಡೆಗೂ ಸ್ವಲ್ಪ ಗಮನ ಹರಿಸಲಿ.

- ಅಕ್ಷತಾ ಸಿ.ಎಚ್.
ಚಿತ್ರ: ಪ್ರಸನ್ನ ಬಿ.ಪಿ