Friday, August 29, 2008

ಮಕ್ಕಳ ಧ್ವನಿಗೆ ವೈಭವದ ಚಾಲನೆ

ಸುರತ್ಕಲ್, ಆ30- ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ ಆಯೋಜಿಸಲಾದ 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಚಾಲನೆ ನೀಡಿದರು.ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ತಿಗಳಿಂದ ತುಂಬಿದ್ದ ವಿದ್ಯಾದಾಯಿನೀ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣ ಅಕ್ಷರಶಃ ಮಕ್ಕಳ ಧ್ವನಿಗೆ ಸಾಕ್ಷಿಯಾಯಿತು.ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ.ರಮಾನಂದ ಭಟ್ ಆಶೀರ್ವಚನ ನೀಡಿದರು.ಸಮ್ಮೇಳನಾಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಹರಿಕೃಷ್ಣ ಪುನರೂರು ಸ್ಮರಣ ಸಂಚಿಕೆ ಅನಾವರಣ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ ಸುಚರಿತ ಶೆಟ್ಟಿ, ಸಿ.ಚಾಮೇ ಗೌಡ, ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.ವಿಶೇಷ ರೀತಿಯ ಉದ್ಘಾಟನೆಗೆ 15ನೆಯ ಮಕ್ಕಳ ಧ್ವನಿ ಸಾಕ್ಷಿಯಾಯಿತು. ವಿದ್ಯಾರ್ತಿಗಳಿಂದ ಹಚ್ಚೇವು ಕನ್ನಡ ದೀಪ ಹಾಡು ಹಾಡುತ್ತಿದ್ದಂತೆಯೇ ಉದ್ಘಾಟಕರು ದೀಪ ಬೆಳಗಿ ಚಾಲನೆ ನೀಡಿದರು. ಸೇರಿದ್ದ ಸಾಹಿತ್ಯಾಭಿಮಾನಿಗಳ ಕರತಾಡನ ಮೆರುಗು ಹೆಚ್ಚಿಸಿತು.ಸ್ವಾಗತ ಸಮಿತಿ ಪಿ.ಕೃಷ್ಣ ಮೂತರ್ಿ ಸ್ವಾಗತಿಸಿದರು. ಬಿ.ಶ್ರೀನಿವಾಸ್ ರಾವ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಾಮನ ಇಡ್ಯಾ ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಗೀತ ಗಾಯನ ಕುಂಚ ನರ್ತನ ಕಾರ್ಯಕ್ರಮ ನಡೆಯಿತು.


ಅವಿಸ್ಮರಣೀಯ ಅನುಭವ : ಮಂಜುನಾಥ ಹೆಗಡೆ

ಸುರತ್ಕಲ್, ಆ.30- `15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಪಟ್ಟ ನನಗೆ ಸಿಕ್ಕಿದ್ದು ನನ್ನ ಭಾಗ್ಯ . ಇದೊಂದು ಅವಿಸ್ಮರಣೀಯ ಅನುಭವ' ಹೀಗೆಂದವರು 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಮೂಡಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ತಿ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ.`ಹೊಂಗಿರಣ' ವೆಬ್ ಸೈಟ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.ಭ್ರಮೆ ಬೇಡ, ನಿಜವಾದ ಕ್ರಿಯೆ ಬೇಕು. ಸಾಹಿತ್ಯವನ್ನು ಜನ ಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕು, ಈ ನಿಟ್ಟಿನಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.ಇದೊಂದು ಅಪೂರ್ವ ಅವಕಾಶ ನನಗೆ ಒದಗಿ ಬಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ಒಂದು ವಿಶ್ವಾಸ ನನಗಿದೆ.ಪ್ರತಿಯೊಬ್ಬ ವಿದ್ಯಾರ್ತಿಯಲ್ಲೂ ಪ್ರತಿಭೆ ಇದ್ದೇ ಇದೆ. ಇದನ್ನು ಪ್ರಚುರ ಪಡಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಮಕ್ಕಳ ಧ್ವನಿ ಪೂರಕ ಎಂದರು.


`ಸಾಹಿತ್ಯ ಅಂತರಾಳದ ಸಂಗೀತ'

ಸುರತ್ಕಲ್, ಆ.30- ಸಾಹಿತ್ಯ ಭಾವನೆಗಳ ಪ್ರವಾಹ. ಅಂತರಾಳದ ಸಂಗೀತ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಅನಿವಾರ್ಯ . ಒಬ್ಬ ವ್ಯಕ್ತಿಯನ್ನು ರೂಪಿಸಬಲ್ಲ, ಬೆಳೆಸಬಲ್ಲ ಅಪೂರ್ವ ಶಕ್ತಿ ಸಾಹಿತ್ಯಕ್ಕಿದೆ ಎಂದು 15ನೇ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಹೇಳಿದರು.ಸಾಹಿತ್ಯ ವ್ಯಕ್ತಿಯನ್ನು ಪ್ರಜ್ಞಾವಂತ ನಾಗರಿಕನನ್ನಾಗಿ ರೂಪಿಸುತ್ತದೆ. ವಿಷಯವೊಂದನ್ನು ಸಾವಿರ ಕೋನಗಳಲ್ಲಿ ವಿಮಶರ್ಿಸಬಲ್ಲ ಯುವ ಮನಸ್ಸು ಪ್ರಜ್ಞಾಶೀಲವಾಗುವುದರ ಜೊತೆಗೆ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.ದುಃಖವನ್ನು ನುಂಗಿಕೊಂಡು ಸುಖವನ್ನು ಜನರಿಗೆ ಹಂಚುವುದೇ ನಿಜವಾದ ಸಾಹಿತ್ಯ ಎಂದು ಅವರು ವಿಶ್ಲೇಷಿಸಿದರು.ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆಯ ಅಭಿವ್ಯಕ್ತಿಗೆ ಸಾಹಿತ್ಯ ಒಂದು ಮಾಧ್ಯಮ. ಆದ್ದರಿಂದ ಸಾಹಿತ್ಯವನ್ನು ಜನಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕಾಗಿದೆ ಎಂದವರು ಹೇಳಿದರು.


ಮಕ್ಕಳ ಧ್ವನಿಗೆ ಹೊಂಬೆಳಕಿನ ಸ್ವಾಗತ

ಸುರತ್ಕಲ್, ಆ.30- ಮಕ್ಕಳ ಧ್ವನಿ ಸಮ್ಮೇಳನಕ್ಕೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ತಿಗಳು `ಹೊಂಬೆಳಕು' ಭಿತ್ತಿ ಪತ್ರಿಕೆಯ ವಿಶೇಷ ಪುರವಣಿಗಳನ್ನು ಹೊರತಂದು ಸರ್ವರ ಪ್ರಶಂಸೆಗೆ ಪಾತ್ರರಾದರು.ಸಮ್ಮೇಳನ ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಉದ್ಘಾಟನಾ ಸಮಾರಂಭವೂ ಸೇರಿದಂತೆ ಸಮ್ಮೇಳನದ ವೈಶಿಷ್ಠ್ಯಪೂರ್ಣ ಮಾಹಿತಿ ನೀಡುವ ಕಾರ್ಯ ಭಿತ್ತಿಪತ್ರಿಕೆಯ ಮೂಲಕ ನಡೆದಿದೆ.