Wednesday, August 6, 2008

ಮುಗಿಲುಗಳು...
ಚಿರಯೌವನದ ಹೊಸ್ತಿಲಲ್ಲಿ
ಕನಸ ಕಾಣುತ, ನಸು ನಗುವಿನ ಛಾಯೆ...
ಹೊಂಗನಸ ಪಡೆಯುವ ನಿರೀಕ್ಷೆ...
ಚಿಮ್ಮಿದೆ ನನ್ನ ಮನದಲ್ಲಿ...
ಅಂತರಾತ್ಮದ ಭಾವನೆಗಳ
ಮುಚ್ಚಿಡಲು ಬಯಸೆ
ಸಂಬಂಧಗಳ ಹುಡಕಾಟ ತೊಡಕಾಟ
ನನ್ನ ಮನದಲ್ಲಿ ಇದೆ ನೂರೊಂದು ಆಸೆ...
ಕ್ಷಣಕಾಲದಲ್ಲಿ ಕೇಳಿತು...
ಆ ಮುಗಿಲಿನ ಆರ್ಭಟ
ತನ್ನೊಡಲನ್ನು ನುಚ್ಚು ನೂರು ಮಾಡಿ
ತನ್ನ ದೇಹವನ್ನು ಪುಡಿ ಪುಡಿ ಮಾಡಿತು
ಜೊತೆಯಲ್ಲಿ ಕಣ್ಣೀರ ಧಾರೆ
ಇದೇಕೆ..???
ವಿರಹದ ಬೇಗೆಯನ್ನು ತಡೆಯಲಾಗದೆ
ಸನಿಹಕ್ಕೆ ಇಳಿದು
ಒಂದಾಗುತಲೆ ಕೇಳಿತು ಅಲ್ಲಿ
ಜಗಳ, ಜಂಜಾಟ, ಸದ್ದು, ಸಿಡಿಲು
ಪ್ರಿಯತಮನ ಮೊರೆಹೋಗಿ
ತನ್ನ ಜೀವನವೇ ಕರಗಿ ನೀರಾಗಿ ಹೋದವು
ಇದೇ ಮುಗಿಲಿನ ಕೊನೆ
ಮತ್ತೆ ಮರು ಜನ್ಮವೆತ್ತಿ...
ಪುನಃ ಆಕಾಶಕ್ಕೆ ಏರಿ ತನ್ನ ಜೀವನದ
ಸಾಗಾಟ ಮುಂದುವರಿಸಿತು ಆ ಮುಗಿಲು
ಇದೇ ಮುಗಿಲಿನ ಚಕ್ರವ್ಯೂಹ
ಮನಸ್ಸಿನ ನೂರು ಆಸೆ
ಪ್ರೀತಿ, ಮೋಹಗಳ ಮಿಶ್ರಣ
ಭವಿಷ್ಯವನ್ನು ತಿಳಿಯಲಾಗದ ಪರಿಸ್ಥಿತಿ
ಕಣ್ಣೀರು ಹಾಕುವ ಘಳಿಗೆ
ಬಂದೇ ಬರುವುದು ನಮಗೆ ಆ
ಮುಗಿಲಿನ ಹಾಗೆ...
- ಜ್ಯೋತಿ.

ಇವು ಹೀಗೇ...
ಬ್ಬರದಿ ಸಾಗುತಿಹ ಮುಗಿಲುಗಳೇ...
ಒಮ್ಮೆ ನಿಂತು ನೋಡುವಿರಾ...
ಬಿಸಿಲ ಬೇಗೆಗೆ ಬೆಂದ ಹೃದಯವು...
ನೋಡುತಿದೆ ನಿಮ್ಮತ್ತ ತುಂಬು ನಿರೀಕ್ಷೆಯಲಿ...
ಕಲ್ಲು ಹೃದಯವು ಬೇಡ...ಹುಸಿಮುನಿಸು ಬೇಡ...
ನೊಂದ ಜೀವಕೆ ಹನಿಸುವಿರಾ..ನಾಲ್ಕು ಹನಿಯ...
ಚಂದಮಾಮನ ಅಡಗಿಸದಿರಿ..
ಜಂಭದಿ ಮೆರೆಯದಿರಿ...
ಮಳೆಯಾಗಿ ಕರಗಿ ಇನ್ನಿಲ್ಲವಾಗುವ ಆ ಸತ್ಯಕೆ...
ಸಾಕ್ಷಿಯಾಗುವಿರಿ ನೀವೂ ಒಂದು ದಿನ ಈ ಮನುಜನಂತೆ...
- ಹಿತಾ ಎಸ್.ಶೆಟ್ಟಿ

ಓ ಮುದ್ದು ಮುಗಿಲೆ..
ಮುಗಿಲೆ ನೀನೇಕೆ ಓಡುವೆ...
ನಿನ್ನ ಬಾಳ ಪಯಣವೇ ಹೀಗೆ...
ಪ್ರಕೃತಿಯ ಅಲಂಕರಿಸಿ
ಕಲ್ಲುಮನ ಖುಷಿಪಡಿಸುವೆ
ನಿಂತಲ್ಲಿ ನಿಲ್ಲದೆ ಹೋಗುತಿಹೆನೀ
ಸುಖಃ ದುಖಃ ಕಂಡೆ ನಾ ನಿನ್ನಲ್ಲಿ
ನೀನಿಲ್ಲದೆ ಬರವಿಲ್ಲ
ನಿಂತು ನೋಡು ನೀನೊಮ್ಮೆ ಧರೆಯಲ್ಲಿ...
ಕಪ್ಪುಬಿಳುಪಿನ ನಿನ್ನ ಬಣ್ಣವು ಹೇಗೋ
ಜನ ಸಮೂಹದ ಮನಸ್ಸಿನ ಬಣ್ಣವೂ ಹಾಗೆ
ತಳಮಳದ ಸಂಶಯ ಕಾಡುತಿಹುದಿಲ್ಲಿ...
ನಿನ್ನ ನೋಡಿದರೆ ಅಳುನಿಲ್ಲುವುದು
ಅದೇ ನೀ ಓಡಿದರೆ ದುಃಖವೇ ಆವರಿಸುವುದು..
ನಿನ್ನ ಸೆಳೆತಕೆ ಒಳಗಾಗುವುದು ಹಲವುಮನ
ನೀ ಬಂದು ನೋಡಿಹೋಗುವ ಹಾಗೆ
ಮಾನವನ ಜೀವನ್ಮರಣವು ಹಾಗೆ..
ಒಂದೊಮ್ಮೆ ಭೂಮಿಯಲಿ ನಿಂತು ಹೋಗುವರು
ನಿನ್ನಂತರಾಳದಲಿ ಪ್ರಗತಿಯನು ನಾ ಕಂಡೆ
ಆ ಪ್ರಗತಿಯೇ ನನ್ನ ಜೀವನಕೆ ತುಂಬಿದೆ...
ಓ ನನ್ನ ಮುಗಿಲೆ ಓ ಮುದ್ದು ಮುಗಿಲೆ..
- ವಾಸು.
ನಾನಾಗುವ ಆಸೆ...
ಬೆಳ್ಮುಗಿಲೇ...
ನಿನ್ನೆದೆಯಲ್ಲಿ ಕುಣಿದಾಡುವ ಮಗು
ನಾನಾಗುವಾಸೆ...
ನಿನ್ನೊಡಲಿ ಮಿನುಗುವ
ಚುಕ್ಕಿ...ತಾರೆ...ನಾನಾಗುವಾಸೆ..
ವಿಶಾಲವಾದ ಸಾಗರಕ್ಕಿಂತ ದೊಡ್ಡದು
ಆ ನಿನ್ನ ಹೃದಯ
ಆ ನಿನ್ನ ಹೃದಯ ವಿಶಾಲೆತೆಯ ಕಂಡು
ನಾನಾದೆ ಬೆರಗು...
ನಿನ್ನ ಆ ಬಿಳಿ ಮೈಯಲ್ಲಿ ಕರಿಮೋಡಗಳ
ಚಿತ್ತಾರ ಕವಿಗಳಿಗೆಲ್ಲ ಸ್ಪೂತರ್ಿ..
ಸೂರ್ಯ ಕಿರಣಗಳ ವರ್ಣ ವೈಭವಕೆ
ನೀ ತೋರುವೆ ನಸು ನಾಚಿ..
ಅದೆಷ್ಟೂ ಮಳೆಹನಿಗಳ ನಿನ್ನೊಡಲಲಿ
ತುಂಬಿ...
ನೀ ತರುವೆ ಇಳೆಗೆ ತಂಪು ಮಳೆಯ...
ಮುಸ್ಸಂಜೆ ಕಾಲದಲ್ಲಿ ಹಕ್ಕಿಗಳ ಸಾಲು..
ಹಿಂಡು ಹಿಂಡಾಗಿ ಸಾಗುವ ಆ ಪರಿಯ
ನಿನ್ನ ಸೌಂದರ್ಯ ಕಾಂತಿಯ ಇಮ್ಮಡಿಗೊಳಿಸಿದೆ...
ಆ ಕಾಂತಿಯ ಕಂಡು
ವರ್ನಿಸಲಾರದಾದೆನು ನಾನು...
- ಅಶ್ವಿನಿ ಆರ್.

ನೀಲ ಮೇಘ ಶ್ಯಾಮನು

ಣ್ಣು ಮುಚ್ಚಿ ಕಣ್ ತೆರೆಯಲು

ಬೆಳಕ ತೋರಿತ್ತು ಮುಗಿಲು

ಆ ನೀಲ ಮೇಘ ಶ್ಯಾಮನು
ಕ್ಷಣ ಮಾತ್ರದಲಿ ಬರಲು
ಮುಗಿಲಲ್ಲಿ ಮೂಡಿತ್ತು ಚಿತ್ತಾರದ ಹೊನಲು
ಮನದಲ್ಲೂ ಮೂಡಿತ್ತು ಚಿತ್ತಾರಗಳು
ಎದೆಯಲ್ಲಿ ನಾಟ್ಯವಾಡಿತ್ತು ನವಿಲು
ಮುಗಿಲಲ್ಲಿ ನೀಲ ಮೇಘನು ಕಾಣಿಸುತ್ತಿರಲು
ಬಂದೇ ಬಿಟ್ಟಿತು ಗುಡುಗು, ಸಿಡಿಲು
ಅಪ್ಪಿ ಹಿಡಿವಂತೆ ಮುಗಿಲು ಸುತ್ತಲೂ
ಒಂದಾಯಿತೇ ಮುಗಿಲೂ ಸಿಡಿಲ
ಹೊತ್ತುರಿಯುವಂತೆ ಎನ್ನ ಒಡಲು
ಇನ್ನೆಲ್ಲಿ ನನ್ನ ನೀಲ ಮೇಘನು
ಕೇಳದಾಯಿತೆ ಅವನಿಗೆನ್ನ ಅಳಲು...
ಅದೇಕೋ ಅನಿಸಿತು ಬೆಳಕ ತೋರಿತ್ತೆ ಮುಗಿಲು
ಇಲ್ಲ... ಕವಿಯೊತೊಡಗಿತೇ ಕತ್ತಲು..
ಕಾಮರ್ುಗಿಲು...ಎನ್ನ ಬಾಳಲೂ...
ಹ್ಹಾಂ... ನನ್ನ ಬಾಳಲೂ...
- ಮೋದಾಕ್ಷಿ...
ಓ ನನ್ನ ಮುಗಿಲುಗಳೇ...
ಬಾ ನಿನಂಗಳದಲ್ಲಿ
ಬಿಳಿ ಕಪ್ಪು ರಂಗಿನಲಿ...
ಚಿತ್ತಾರ ಬಿಡಿಸುತಿಹ
ಆಗಸದಿ ಮನೆ ಮಾಡಿರುವ
ಓ ನನ್ನ ಮುಗಿಲುಗಳೇ
ಓ ನನ್ನ ಮುಗಿಲುಗಳೇ...
ರವಿ, ಚಂದ್ರ, ಗ್ರಹ, ತಾರೆ ನಿನ್ನ ಸಂಗಾತಿಗಳೋ...
ಹಾರುವ ಹಕ್ಕಿಗಳು ನಿನ್ನ ಒಡನಾಡಿಗಳೋ...
ದಿಗಂತದ ಅಂಚಿನಲಿ ನಿನ್ನ ಆಟ ಪಾಠಗಳೋ...
ಸಾಲು ಸಾಲುಗಳಲ್ಲಿ ನಿನ್ನ ನಡೆದಾಟಗಳೋ...
ಚಲಿಸುವ ಮೋಡಗಳೇ...
ಇಂದು ಭುವಿ ತಾಪದಿ
ಕೊತ ಕೊತ ಕುದಿಯುತಿದೆ..
ವರ್ಷ ಧಾರೆಯ ಹರಿಸಿ
ಹರುಷದ ಹೊಳೆ ಚೆಲ್ಲಿ
ಧರೆಗಿಳಿದು ಬನ್ನಿ... ಧರೆಗಿಳಿದು ಬನ್ನಿ
ಓ ನನ್ನ ಮುಗಿಲುಗಳೇ..
- ಪರಿಣಿತ ಎಸ್...
ಮುಗಿಲಿನೆಡೆಗೆ...
ನ್ನಾಸೆಯ ಹಕ್ಕಿಯನು
ಹಾರಬಿಟ್ಟೆ ನಾ ಮುಗಿಲಿನೆಡೆಗೆ
ರೆಕ್ಕೆಯನು ಬಡಿಯುತ್ತಾ ಸಾಗಿತದು
ತನ್ನ ಗರಿಯ ಬಿಚ್ಚಿ ಪಟ ಪಟನೆ...
ಆದರೊಂದು ಅಳುಕಿತ್ತು ಅದೇ...
ತುಲುಪುವೆನೋ ಗುರಿಯಾ...?
ಮನದಲಿ ಸಂತಸ ಮೂಡಿತ್ತು..
ನಾ ಸೇರುವೆನು ಗುರಿಯ..
ಬಂದ ಹಕ್ಕಿಗಳ ಬಳಗ
ಹೀಯಾಳಿಸಿತು ನೀ ಒಂಟಿ
ಸಾಧಿಸಲಾರೆ ಗುರಿಯಾ...
ದಾರಿ ತಪ್ಪಿ ಹೋಗುವೆ
ಕೆಳಗೆಬಿದ್ದು ಮಣ್ಣಾಗುವೆ ಕೊನೆಗೆ
ನನ್ನಸೆಯ ಹಕ್ಕಿ ಮುನ್ನುಗ್ಗಿತು ಸ್ಥೈಯದಲಿ..
ಹಲವು ಎಡರು ತೊಡರುಗಳ ಸರಿಸಿ
ಕೊನೆಗೂ ಸೇರಿತು ತನ್ನ ಗುರಿಯ
ತನ್ನ ಕುಂದದ ನಿಶ್ಚಲ ಸ್ಥೈರ್ಯದಲಿ...
ತೇಲಿತು ತಾನು ಮುಗಿಲಲೊಂದಾಗಿ...
-ಸೌಮ್ಯ.

ಮುತ್ತಾಗುವುದು...
ಗಸದಲ್ಲಿ ಚೆದುರಿದ
ಮುಗಿಲ ತುಂತುರು ಹನಿ
ಸ್ವಾತಿ ಮಳೆಯಾಗಿ
ಚಿಪ್ಪಿನಲಿ ಬಿದ್ದು ಮುತ್ತಾಗುವುದು
ಭುವಿಯಿಂದ ಆಗಸಕೆ ನೆಗೆದು
ಮತ್ತೆ ಭುವಿಯ ಸೇರುವುದು.
ಸದಾಕಾಲ ತೇಲುತ ಇರುವ
ಮುಗಿಲ ಮುಟ್ಟುವ ಆಸೆ
ಯಾರಿಗಿರದು ...?
ಅಲ್ಲಲ್ಲಿ ನಿಂತು ಮಳೆಯಾಗಿ ಬಂದು
ಮುಟ್ಟುವ ಆಸೆಯ ತೀರಿಸುವುದು.
ವರ್ಷವಾಗಿ ಇಳೆಯ ಪುರೆವ
ಮುಗಿಲು ಕಾಣದಾಗಿದೆ ಎಂದು...
ನಾವೇ ಮೋಡ ಬಿತ್ತುವುದಂತೆ!
ಮುಗಿಲು ಕ್ರುದ್ಧವಾಗಿ ಆಗಸದಲ್ಲಿ
ಸ್ಪೋಟಿಸಿದರೆ ಬಿತ್ತನೆಗೆ ಇರೆವು ನಾವು.
ಓ ಮುಗಿಲೆ ಧಾತ್ರಿಯ ನಮ್ಮನ್ನು
ಸಲಹೇ ಕಾಲಕಾಲಕ್ಕೆ ವರ್ಷವಾಗಿ
ಬಂದು...
ಎಲ್ಲಿಯೂ ಓಡದೆ ತಂಪು ನೀಡಿ
ಸವೆದು ಬುವಿಯ ತಲುಪಿ ಶೋಭೀಸೇ...
- ಅಶ್ವಿನಿ ಐಗಳ್..