Monday, July 14, 2008

ಹೀಗೇ ಸುಮ್ಮನೆ...

ಸ್ನೇಹದ ಪಯಣದಲ್ಲಿ

ಗೆಳೆತನ ವೆಂಬುದು ಒಂದು ಪವಿತ್ರ ಬಂಧನ ಬಿಡಿಸಲಾಗದ ಬಂಧನ, ಏನೇ ಹೇಳಿ ಅದು ಗೆಳೆತನದ ಮಹಿಮೆ (ಆಳ)ವನ್ನು ತಿಳಿಸುತ್ತದೆ. ಗೆಳೆತನಕ್ಕಿಂತ ಮಿಗಿಲಾದದ್ದು ಯಾವುದೂ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಎಲ್ಲವೂ ಗೆಳೆತನದ ಮೂಲಕ ಪ್ರಾರಂಭವಾಗಿ ಮತ್ತೆ ಬೇರೆ ಬೇರೆ ಸಂಬಂಧಗಳು, ಸಂಬಂಧಿಕರು ಎಂಬುದಕ್ಕೆ ನಾಂದಿಯಾಗುತ್ತದೆ. ಗೆಳೆತನ ಒಂದು ಅದ್ಭುತ ಶಕ್ತಿ ಎಂದೂ ಹೇಳಬಹುದು. ಸಾಯುತ್ತಿರುವ ಅಥವಾ ನರಳುತ್ತಿರುವ ವ್ಯಕ್ತಿಗೆ ಗೆಳೆತನದ ಸ್ವರ್ಶವಾದರೆ ಅವನ ಮುಖದಲ್ಲಿ ಅರುಳುವ ಆ ಮಂದಹಾಸ, ಅವನ ಲವಲವಿಕೆ ಇದಕ್ಕೆ ಸಾಕ್ಷಿ. ಗೆಳೆತನ ಎಂಬುದಿಲ್ಲದ್ದರೆ ಈ ಜಗತ್ತೇ ಇಲ್ಲವೆಂದು ಹೇಳಬಹುದು. ಪ್ರತಿಯೊಂದು, ವ್ಯಕ್ತಿಯ ಪರಿಚಯ, ಅವರ ನಡುವೆ ನಡೆಯುವ ಸಂಭಾಷಣೆ, ಅವರು ಇನ್ನೊಮ್ಮೆ ಸಿಕ್ಕಾಗ ಅವರ ಮುಗುಳು ನಗು, ಅವರು ಮತ್ತೊಮ್ಮೆ ಸಿಕ್ಕಾಗ ಸ್ನೇಹ ಭರಿತ ಮಾತು, ಅನಂತರ ಅವರಿಬ್ಬರ ನಡುವೆ ಒಡಮೂಡುವ ಆತ್ಮೀಯತೆ, ಸ್ನೇಹ ಇವೆಲ್ಲವೂ ಅಗಮನೀಯ. ಕೆಲವರಿಗೆ ತಮ್ಮ ಸ್ನೇಹಿತರು ಎಷ್ಟು ಆತ್ಮೀಯರಾಗಿ ಬಿಡುತ್ತಾರೆಂದರೆ ಅವರ ಮೊದಲ ಭೇಟಿಯೇ ನೆನಪಿರುವುದಿಲ್ಲ. ಯಾಕೆಂದರೆ ಅಷ್ಟೊಂದು ಪ್ರೀತಿ, ವಿಶ್ವಾಸ, ಸ್ನೇಹ ಅವರಲ್ಲಿ ಜನುಮ ಜನುಮದ ಬಂಧನವನ್ನು ಏರ್ಪಡಿಸಿ ಬಿಡುತ್ತದೆ. ಇನ್ನು ಕೆಲವರಿಗೆ ಜಗಳ (ದ್ವೇಷ) ದಿಂದ ಪ್ರಾರಂಭವಾದ ಭೇಟಿಯು ಸ್ನೇಹಕ್ಕೆ ತಿರುಗುವುದೂ ಉಂಟು. ಸ್ನೇಹದಲ್ಲಿ ಹಂಚಿಕೊಳ್ಳುವಿಕೆ, ಮುಖ್ಯ ನೊಂದಾಗ ಸಮಾಧಾನ ಹೇಳುವುದು, ಅವರ ಗುರಿಯನ್ನು ಮುಟ್ಟಲು ಸಹಕರಿಸುವುದು, ಹುರಿದುಂಬಿಸುವಿಕೆ, ಸದಾ ಜೊತೆಯಲ್ಲಿದ್ದು ಸುಃಖ ದುಃಖಗಳಲ್ಲಿ ಪಾಲುದಾರನಾಗುವುದು ಅವಶ್ಯ ಇವೆಲ್ಲ ಇದ್ದಾಗಲೇ ಅಲ್ಲಿ ಆರೋಗ್ಯಕರ ಸ್ನೇಹ ಸಾಧ್ಯ. ಸ್ನೇಹ ಬಂಧನ ಕಠೋರ ಹೃದಯದಲ್ಲೂ ಚಿಗುರೊಡೆಯಲು ಸಾಧ್ಯ. ಅದೂ ಎಲ್ಲರಿಗೂ ಲಭ್ಯ, ಅಂದರೆ ಸ್ನೇಹವನ್ನು ಬಯಸುವ ಮನಸ್ಸು, ಸದಾ ತಮ್ಮ ಪ್ರೀತಿ, ದುಃಖ, ಸಂತೋಷ ಕೆಲವೊಮ್ಮೆ ಸಂತಾಪಗಳನ್ನು ಹಂಚಿಕೊಳ್ಳುವ ಮನಸ್ಸಿರುವವರು ಅತಿ ಬೇಗನೆ ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ. ಕೆಲವರಿದ್ದಾರೆ ತಮ್ಮ ದುಃಖ, ತಮ್ಮ ಸಂತಾಪಗಳನ್ನೂ ಇತರರ ಬಗೆಗಿನ ಆಗದ ಹೋಗದ ವಿಷಯಗಳನ್ನೂ ಹೇಳಿಕೊಳ್ಳಲಿಕ್ಕೋಸ್ಕರವಾಗಿ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಾರೆ. ಅಂಥಹವರಿಂದ ಇದ್ದ ಸ್ನೇಹಿತರೂ ದೂರವಾಗಿ ಅವರು ಒಂಟಿಯಾಗುವುದು ಜಾಸ್ತಿ. ಸ್ನೇಹದ ಪರಿಚಯ ಮತ್ತು ನಾವು ಅವರನ್ನು ಅರಿತುಕೊಳ್ಳವುದು ಸ್ನೇಹಿತರ ಅಗಲುವಿಕೆಯ ಸಂದರ್ಭ ಬಂದಾಗ ಮಾತ್ರ. ಉದಾಹರಣೆಗೆ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾಥರ್ಿ/ವಿದ್ಯಾಥರ್ಿನಿಯರು ವರ್ಷದ ಕೊನೆಗೆ ಏನೋ ಕಳೆದುಕೊಂಡವರಂತೆ ಇರುವುದು, ತಮ್ಮ ಗೆಳೆಯ/ಗೆಳತಿಯರ ಹಸ್ತಾಕ್ಷರ ಭರಿತ ಪುಸ್ತಕವನ್ನು ನೆನಪಾಗಿಟ್ಟುಕೊಳ್ಳುವುದು, ಯಾವತ್ತೂ ಅವರೊಟ್ಟಿಗಿದ್ದಾಗ ಬಾರದ ಅಳು ಪರೀಕ್ಷೆಯ ಕೊನೆಗೆ ಧುಮ್ಮಿಕ್ಕುವುದು ಇವೆಲ್ಲಾ ಆದರೆ, ಇನ್ನೊಂದೆಡೆ ಹೇಳುವುದಾದರೆ ಆಕಸ್ಮಾತ್ತಾಗಿ ಸಂಭವಿಸಿದ ಗೆಳೆಯರ ಸಾವು ಕೂಡ ಭರಿಸಲಾರದ ನಷ್ಟವಾಗಿ ಬಿಡುತ್ತದೆ. ಗೆಳೆತನ ವೆಂದರೆ ನಾವು ನಮ್ಮೊಳಗೆ ಅವರಿಗಾಗಿಟ್ಟಿರುವ ಅಚ್ಚಳಿಯದ ಸಾವಿರದ ಪ್ರೀತಿ. ಸ್ನೇಹ, ಇದು ಉಕ್ಕಿ ಹರಿಯಬಹುದೇ ಹೊರತು ಎಂದು ಬರಡಾಗದು. ಅವರು ನಮ್ಮಿಂದ ದೂರವಾದಗ ಅವರ ಇರುವಿಕೆ ಮರೆತು ಹೋಗಬಹುದು. ಆದರೆ ಹಿಂದಿನ ಆ ಸುಂದರ ನೆನಪುಗಳು ಮತ್ತು ಅವರ ಮುಖ ಕಾಣಸಿಕ್ಕಾಗ ನಮ್ಮಲ್ಲಾಗುವ ಆನಂದ ಎಂದೆಂದಿಗೂ ಮರೆಯಲಾಗದು. ಗೆಳೆಯರು ನಮ್ಮೊಟ್ಟಿಗಿದ್ದಾಗಿನ ಸಂತೋಷ ಲವಲವಿಕೆ, ಮೋಜು, ಆನಂದ,ಆ ಜೀವಂತಿಕೆ ಅವರಿಲ್ಲದಾಗ ಇರುವುದಿಲ್ಲ ಹೊರ ದೇಶಕ್ಕೂ ಎಲ್ಲೋ ಹೋಗಿ ನೆಲೆಸಿ ತಮ್ಮ ದೇಶಕ್ಕೂ, ಊರಿಗೂ ವಾಪಾಸದಾಗ ಗೆಳೆಯರನ್ನು ನೋಡಿದ ಕೂಡಲೇ ಆ ಉತ್ಸಾಹ ಆನಂದ ಎಲ್ಲಾ ಕಾಣಸಿಗುತ್ತದೆ. (ಸ್ನೇಹಿತ) ಗೆಳೆಯರೊಟ್ಟಿಗೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟ. ಆಗ ತಿಳಿಸಿದಂತೆಯೇ ಅದೊಂದು ಅದ್ಭುತ ಶಕ್ತಿ, ಅದೊಂದು ಶ್ರೇಷ್ಠ ಭಾಂದವ್ಯ. ಗೆಳೆತನವೆಂಬುದು ಇಲ್ಲದಿದ್ದರೆ ಈ ಭೂಮಿಯೊಳಗಿನ ಜೀವರಾಶಿಗಳು ಒಂದಕ್ಕೊಂದು ಕಚ್ಚಾಡಿ, ಜಗಳವಾಡಿ ಸಾಯುತ್ತಿದ್ದವು, ಜೀವರಾಶಿಯ ಬೆಳವಣಿಗೆ ಸಾಮಾನ್ಯ ಮಾತುಕತೆಗಳೂ ಇರುತ್ತಿರಲ್ಲಿಲ್ಲ. ನಮ್ಮ ಪೂರ್ವಜರ ಸ್ನೇಹ ಸೌಹರ್ದತೆಯು ಇಂದಿಗೂ ನಾವು ಕೂಡಿಬಾಳಿದರೆ ಸ್ವರ್ಗ ಸುಖ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿ ಅವರ ಸ್ನೇಹದ ಬಲವನ್ನು ತಿಳಿದುಕೊಳ್ಳುವಂತಾಗಿದೆ. ಈಗ ರಾಜಕೀಯದಲ್ಲೇ ಇರಲಿ, ವ್ಯಾಪರ ವ್ಯವಹಾರವಾಗಿರಲಿ ಯಾವ ದೇಶವೂ ಬೆಳೆಯುತ್ತಿರಲಿಲ್ಲ.

- ಸೌಮ್ಯ

No comments: