Monday, July 14, 2008

ಸಂಪಾದಕೀಯ...

ನಾವು ನಡೆದು ಬಂದ ಹಾದಿ

ವಿದ್ಯಾರ್ಥಿ ಜೀವನ ಪ್ರತಿಭೆಗಳನ್ನು ಅನಾವರಣಗೊಳಿಸುವ ಪರ್ವಕಾಲ. ವಸಂತ ಮಾಸದಲ್ಲಿ ಮೊಗ್ಗೊಡೆದು ಬಿರಿಯುವ ಪುಷ್ಪಗಳಂತೆ ಈ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಅಂತರ್ಗತಗೊಂಡಿರುವ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಜೀವನದ ಗುರಿಯನ್ನು ಸಾಧಿಸುವ ಅದಮ್ಯ ಹುಮಸ್ಸು, ಪ್ರಪಂಚವನ್ನೇ ಗೆಲ್ಲುವ ಆತ್ಮವಿಶ್ವಾಸ ಇವರಲ್ಲಿ ಪುಟಿದೇಳುತ್ತಿರುತ್ತವೆ. ವಿದ್ಯಾರ್ಥಿ ಜೀವನ ಸಾಧನಾ ಜೀವನ. ಈ ಹಂತದಲ್ಲಿ ಅವರು ಸಾಧಿಸಿದ ಸಾಧನೆಗಳು ಜೀವನದುದ್ದಕ್ಕೂ ಅವರಿಗೆ ದಾರಿದೀಪವಾಗುವುದು. ಹಾಗಾಗಿ ಈ ಕಾಲದಲ್ಲಿ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಆದ್ಯ ಕರ್ತವ್ಯ ವಿದ್ಯಾಸಂಸ್ಥೆಗಳದ್ದು.
ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹೊಸ ಹೊಸ ಹೆಜ್ಜೆಗಳನ್ನಿರಿಸುತ್ತಿದೆ. ಕೇವಲ ಮೂರು ವರುಷಗಳ ಹಿಂದಷ್ಟೇ ಪ್ರಾರಂಭಗೊಂಡ ನಮ್ಮ ವಿಭಾಗ ಇನ್ನೂ ಪುಟ್ಟ ಕೂಸು. ಸಾವಿರ ಕನಸುಗಳೊಂದಿಗೆ ಹುಟ್ಟಿಕೊಂಡ ಇದು ಭವಿಷ್ಯದಲ್ಲಿ ನನಸಾಗಿಸಬೇಕಾದ್ದು ಬೆಟ್ಟದಷ್ಟಿದೆ. ಶೈಕ್ಷಣಿಕ ಜಗತ್ತಿನ ಬದಲಾವಣೆಗಳಿಗನುಗುಣವಾಗಿ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಚಿಂತನೆಯನ್ನು ಹಲವು ವರ್ಷಗಳ ಹಿಂದೆ ನಮ್ಮ ಕಾಲೇಜಿನ ಆಡಳಿತ ಮಂಡಳಿ ನಡೆಸಿತ್ತು. ಪರಿಣಾಮ 2005-2006ನೇ ಶೈಕ್ಷಣಿಕ ವರ್ಷದಲ್ಲಿ 'ಪತ್ರಿಕೋದ್ಯಮ'ವನ್ನು ಬಿ.ಎ ಪದವಿಗೆ ಐಚ್ಚಿಕ ವಿಷಯವನ್ನಾಗಿ ಪರಿಚಯಿಸಲಾಯಿತು. ವಿದ್ಯಾರ್ಥಿ ಗಳಿಗೆ ತೀರಾ ಹೊಸದಾಗಿರುವ ಈ ವಿಷಯದ ಕುರಿತು ಅರಿವು ಮೂಡಿಸುವ ಸಲುವಾಗಿ ವಿಭಾಗದ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತು. ಪ್ರಾರಂಭದಲ್ಲೇ ವಿಭಾಗದ ಎಲ್ಲಾ ಚಟುವಟಿಕೆಗಳಿಗೆ ವಿದ್ಯಾಥರ್ಿಗಳು ಉತ್ತಮವಾಗಿ ಸ್ಪಂದಿಸತೊಡಗಿದರು .ತಮ್ಮ ಸ್ಪ್ತಂದನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುವ ಪ್ರಯತ್ನವನ್ನೂ ಮಾಡಿದರು. ಆ ಪ್ರಯತ್ನದ ಫಲವೇ 'ವಿದ್ಯಾದರ್ಪಣ'. 2006ರಲ್ಲಿ ಪ್ರಾರಂಭಗೊಂಡ ಈ ಪ್ರಯೋಗಿಕ ಪತ್ರಿಕೆ ವಿದ್ಯééಾಥರ್ಿಗಳಲ್ಲಡಗಿದ ಸುಪ್ತ ಬರವಣಿಗೆಯ ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತವೇದಿಕೆಯಾಗಿ ಹೊರಹೊಮ್ಮಿತು. ನಮ್ಮ ವಿದ್ಯಾಥರ್ಿಗಳ ಸಹಕಾರ ಹಾಗೂ ಯುಕ್ತ ಸ್ಪಂದೆಯಿಂದ ಪತ್ರಿಕೆ ಇಂದು ಯಶಸ್ವಯಗಿ ಎರಡು ಸಂಪುಟಗಳನ್ನು ಪೂರೈಸಿದೆ.
ಕೇವಲ ಹದಿಮೂರು ವಿದ್ಯಾಥರ್ಿಗಳಿಂದ ಪ್ರಾರಂಭಗೊಂಡ ನಮ್ಮೀ ವಿಭಾಗ ಪ್ರಸ್ತುತ ನಲವತ್ತಾರು ಯುವ,ಆಕಾಂಕ್ಷಿ ವಿದ್ಯಾರ್ಥಿ ಗಳನ್ನು ಹೊಂದಿದೆ.ಪಠ್ಯವಿಷಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿದ್ದು ವಿಭಾಗಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಾಲೇಜು ಕಲ್ಪಿಸಿದೆ.
ವೈಚಾರಿಕ ಪ್ರಜ್ಞೆ ಪತ್ರಿಕೋದ್ಯಮ ವಿದ್ಯಾಥರ್ಿಯಲ್ಲಿರಬೇಕದ ಪ್ರಮುಖ ಗುಣ.ಆತ ತನ್ನ ಸಮಜದ ಆಗುಹೋಗುಗಳನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು. ವಿದ್ಯಾರ್ಥಿಗಳ ಸ್ಪಂದನೆಗಳನ್ನು ಹೊರಜಗತ್ತಿಗೆ ತಲುಪಿಸುವ ಮತ್ತೊಂದು ಕಿರು ಪ್ರಯತ್ನವೇ ನಮ್ಮ ನೂತನ ಬ್ಲಾಗ್ 'ಹೊಂಗಿರಣ'.ಈ ಬ್ಲಾಗ್ ವಿದ್ಯಾರ್ಥಿಗಳ ಬರಹ-ಸಂವೇದನೆಗಳನ್ನು ಹೊರಜಗತ್ತಿಗೆ ತಲುಪಿಸುವುದರ ಜತೆ ಅವರ ವೈಚಾರಿಕ ನೆಲೆಗಟ್ಟನ್ನು ಇನ್ನಷ್ಟು ಭದ್ರಗೊಳಿಸುವಲ್ಲಿ ಸಹಾಯಕರಿ.ನಮ್ಮ ಈ ವಿನೂತನ ಪ್ರಯತ್ನ ವಿದ್ಯಾರ್ಥಿಗಳ ಅಂತಃಶಕ್ತಿಗೆ ಧ್ವನಿಯಾಗಲಿ,ಅವರಲ್ಲಡಗಿಹ ಪ್ರತಿಭೆಯಾಗಲಿ,ಹೊಸ ಸಾಧನೆಗಳಿಗೆ ನಾಂದಿ ಹಾಡಲಿ ಎಂಬುದೇ ನಮ್ಮೆಲ್ಲರ ಆಶಯ.
- ಸಂಪಾದಕರು.

1 comment:

ಭಾವನೆಗಳಿಗೆ ಜೀವ ತುಂಬುತ್ತ... said...

ಚೆನ್ನಾಗಿದೆ.... ಕನ್ನಡ ಅಕ್ಷರಗಳನ್ನು ಟೈಪ್ ಮಾಡುವಾಗ ತಪ್ಪಾಗದಂತೆ ಗಮನ ವಹಿಸಿ... ಸಾಧ್ಯಾವಾದಷ್ಟು ಪ್ರೀತಿ, ಪ್ರೇಮ, ಸ್ನೇಹವನ್ನು ಬಿಟ್ಟು ಗಂಭೀರ ವಿಷಯಗಳ ಬಗ್ಗೆ ಬರೆಯುವುದು ಒಳಿತು... good luck...