Monday, July 14, 2008

ಮಹಿಳೆ...




ಸ್ತ್ರೀ ಮತ್ತು ಉದ್ಯೋಗ

`ಉದ್ಯೋಗಂ ಪುರಷ ಲಕ್ಷಣಂ' ಎಂಬುದು ಸಾಮಾನ್ಯ. ಯಾವುದೇ ಉದ್ಯೋಗವಾದರೂ ಅದು ಪುರುಷರಿಗಷ್ಟೇ ಸೀಮಿತ ಎಂಬಂತ ಮಾತು ಕೇಳಿಬರುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಮಾತು ಸುಳ್ಳಾಗಿದೆ. `ಉದ್ಯೋಗಂ ಸ್ತ್ರೀ ಲಕ್ಷಣಂ' ಎಂಬಂತಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಬೇರೆಕಡೆಗಳಿಗೆ ಹೋಗಿ ಉದ್ಯೋಗ ಮಾಡುವುದನ್ನು ನಮ್ಮ ಸಮಾಜ ತಾತ್ಸಾರ ಭಾವನೆಯಿಂದ ಕಾಣುತ್ತಿತ್ತು. ಹಿಂದೆ ಸ್ತ್ರೀ ಕೇವಲ ಅಡುಗೆ ಮನೆಗಷ್ಟೇ ಸೀಮಿತ ಎಂಬತಿದ್ದಳು. ಗಂಡನ ಸೇವೆಮಾಡುತ್ತಾ ಮನೆ, ಮಕ್ಕಳು , ಸಂಸಾರವನ್ನು ನೋಡುವುದು ಆಕೆಯ ಕೆಲಸಎಂಬಂತಿತ್ತು. ಹೀಗಾಗಿ ಸ್ತ್ರೀ ಉದ್ಯೋಗ ಮಾಡುವುದು ಅವಲಕ್ಷಣವೆನಿಸುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸ್ತ್ರೀ ಜೀನವದ ಎಲ್ಲಾ ರಂಗಗಳ ಉದ್ಯೋಗದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾಳೆ.
ಸ್ತ್ರೀ ಸ್ವಾವಲಂಬಿಯಾಗಿದ್ದಾಳೆ. ಡ್ರೈವರ್ ಸೀಟಿನಲ್ಲಿ ಕುಳಿತು ಅಟೋ ಓಡಿಸುತ್ತಾಳೆ... ಪುರುಷರಂತೆ ಬಸ್ಸುಗಳಲ್ಲಿ ಟಿಕೇಟ್ ನೀಡುತ್ತಾಳೆ... ಇಷ್ಟೇ ಯಾಕೆ ದಕ್ಷ ಪೊಲೀಸ್ ಅಧಿಕಾರಿಯಾಗಿಯೂ ಕಾಣಿಸಿಕೊಳ್ಳುತ್ತಾಳೆ... ರಾಷ್ಟ್ರಪತಿಯಂತಹ, ಪ್ರಧಾನಿಯಂತಹ ಹುದ್ದೆಯನ್ನೂ ಸಮರ್ಥಕವಾಗಿ ನಿರ್ವಹಿಸಿದ್ದಾಳೆ.
ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅನಿವಾರ್ಯ. ಶಿಕ್ಷಣ ಸಂಸ್ಥೆಗಳಲ್ಲಿ, ರಾಜಕೀಯ ರಂಗದಲ್ಲಿ, ಬಾಹ್ಯಾಕಾಶದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ, ಗೃಹ ಕೈಗಾರಿಕೆಯಲ್ಲಿ ಹೀಗೆ ಪುರುಷನಿಗೆ ಸಮಾನಾಗಿ ದುಡಿಯುತ್ತಿದ್ದಾಳೆ. ಇದರಿಂದಾಗಿ ಸ್ತ್ರೀ ಶೋಷಣೆ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.
ಕಾವ್ಯಶ್ರೀ

No comments: