Monday, July 14, 2008

ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ


`ಜಲ' ಈ ಎರಡಕ್ಷರದ ಪದ ಕೇವಲ ನೀರಲ್ಲ! ಅದು ಜೀವ ಕೊಡುವ ಶಕ್ತಿ. ಆ ಕಾರಣಕ್ಕೇ ಅದಕ್ಕೆ ಜೀವಜಲ ಎಂಬ ಹೆಸರು. ಈ ಜಲವನ್ನು ಆಯಾ ಪ್ರದೇಶ, ಭಾಷೆಯಲ್ಲಿ ವಿಭಿನ್ನವಾಗಿ ಕರೆಯಲಾಗಿದೆ. ಕನ್ನಡದಲ್ಲಿ ನೀರು, ಕೊಂಕಣಿಯಲ್ಲಿ ಉದಕ್, ತುಳುವಿನಲ್ಲಿ ನೀರ್, ಆಂಗ್ಲಭಾಷೆಯಲ್ಲಿ ವಾಟರ್, ಹಿಂದಿಯಲ್ಲಿ ಪಾನಿ, ಮಲೆಯಾಳಂನಲ್ಲಿ ವೆಳ್ಳಂ ಹೀಗೆ ಕರೆಯಲಾಗುತ್ತದೆ. ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯುವುದು ಪ್ರಸಕ್ತ ದಿನಗಳಲ್ಲಿ ಅನಿವಾರ್ಯ. ತನ್ಮೂಲಕ ಜಲ ಸಂರಕ್ಷಣೆಯನ್ನು ಪ್ರತಿಯೊಬ್ಬನೂ ಕೈಗೊಳ್ಳಬೇಕಾದ ಸ್ಥಿತಿಯೂ ಇಂದೊದಗಿ ಬಂದಿದೆ.
ದೈನಂದಿನ ಜನಜೀವನದ ಕಾರ್ಯಚಟುವಟಿಕೆಗಳಲ್ಲಿ ನೀರಗೆ ಪ್ರಮುಖ ಸ್ಥಾನವಿದೆ. ನೀರಿಲ್ಲದೆ ಪ್ರಾಣಿ, ಪಕ್ಷಿ ಜೀವಸಂಕುಲಗಳು ಬದುಕಲು ಸಾಧ್ಯವೇ ಇಲ್ಲ. ಆದರೆ ಇಂದು ಈ ಪ್ರಾಮುಖ್ಯವಾದ ನೀರಿಗೆ ತೊಂದರೆಯೊದಗುವು ಅಪಾಯಕಾರಿ ಸ್ಥಿತಿ ಬಂದೊದಗಿದೆ.
ಮಾನವನ ಅತಿಬುದ್ದಿವಂತಿಕೆಯಿಂದ ಪರಿಸರದಲ್ಲಿ ಅಸಮತೋಲನವುಂಟಾಗಿದೆ. ಇದು ನೇರವಾಗಿ ನೀರಿನ ಮೇಲೂ ಪರಿಣಾಮ ಬೀರತೊಡಗಿದೆ. ಇಂದು ನಿರಂತರ ಪರಿಸರ ಮಾಲಿನ್ಯ, ಪರಿಸರ ಹಾನಿ ನಡೆಯುತ್ತಿದೆ. ಬೃಹದಾಕಾರದ ಕಟ್ಟಡಗಳ ನಿಮರ್ಾಣ, ಉದ್ಯಮಗಳ ಸ್ಥಾಪನೆಗಾಗಿ ಹಸಿರ ಕಾಡಿಗೆ ಕೊಡಲಿಯೇಟು ಬೀಳಲಾರಂಭಿಸಿದೆ. ಇದರಿಂದಾಗಿ ಸರಿಯಾದ ಸಂದರ್ಭದಲ್ಲಿ ಮಳೆಯಿಲ್ಲ, ಮಳೆಯಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಆಹಾರ ಧಾನ್ಯಗಳಿಲ್ಲ ಎಂಬಂತ ಸ್ಥಿತಿ ಬಂದೊದಗಿದೆ. ಕಾಲ ಕಾಲಕ್ಕೆ ಮಳೆಯಾಗದೆ ಕೃಷಿಕರು ತೊಂದರೆಯನ್ನನುಭವಿಸುವಂತಾಗಿದೆ.
ಕಟ್ಟಡ ಕಾಮಗಾರಿ, ಇತರೆ ಕಾಮಗಾರಿಗಾಗಿ ನೀರಿನ ಅತಿಯಾದ ಬಳಕೆಯಿಂದಾಗುತ್ತಿದೆ. ನೀರನ್ನು ಹಿತ ಮಿತವಾಗಿ ಬಳಸಬೇಕು. ಜಲ ಮಾಲಿನ್ಯವನ್ನು ತಡೆಗಟ್ಟಬೇಕು. ಭೂಮಿಯಲ್ಲಿ ನೀರಿಂಗುವಂತೆ ಮಾಡಿ ಜಲ ಸಂರಕ್ಷಣೆಗೆ ನಾವು ಸಿದ್ಧರಾಗಬೇಕು. ಅಂತರ್ಜಲದ ಮಟ್ಟ ಏರಿಸುವಂತೆ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಕಾಯರ್ೋನ್ಮುಖರಾಗಬೇಕಾಗಿದೆ.
- ಬಿನ್ಸಿ ವರ್ಗೀಸ್.

No comments: