Monday, July 14, 2008

ಕವನ


ಸಾಧನೆ

ಸಾಧನೆಯ ಶಿಖರಕ್ಕೆ ಹಲವಾರು ಮೆಟ್ಟಿಲು
ಜಾಗ್ರತೆಯ ಹೆಜ್ಜೆಗೆ ನೀನಾಗು ಶಕ್ತಿ
ಪ್ರತಿಯೊಬ್ಬರ ಅಂತರಾಳದಲ್ಲಿ
ಮಲಗಿದೆ ಆತ್ಮವಿಶ್ವಾಸ
ಬಡಿದೆಬ್ಬಿಸು ಸರಿಯಾದ ಸಮಯದಲ್ಲಿ
ಸೋಲಿಲ್ಲದವರ್ಯಾರಿಲ್ಲ ಜಗದಲ್ಲಿ
ಸೋಲೆಗೆಲುವಾಗುವುದು ಜೀವನದಲ್ಲಿ
ಸೋಲಿಗೆ ಸಾವಲ್ಲ ಪರಿಹಾರವಿಲ್ಲ
ಪುಟ್ಟ ಹೆಜ್ಜೆಯ ನೀಡುವಾಗ ನೀ
ಬಿದ್ದೆದ್ದೆ ಎಷ್ಟು ಬಾರಿ
ಹಾಗೆಂದು ನಡೆಯದೆ ಕುಳಿತೆಯಾ ನೀ
ಹಗಲಿರುಳು ಬಂದು ಹೋಗುವುದು ಹೇಗೋ
ಜೀವನದ ಸುಖ ದುಃಖವು ಹಾಗೇ
ಅದನರಿಯಾ ಬೇಕು ಓ ಮನವೇ
ಜಯದ ಹಾದಿಯಲ್ಲಿ ನೂರಾರು ಅಡೆತಡೆ
ಅಡೆತಡೆಯ ಭೇದಿಸಿ ನಡೆ ನೀ ಮುಂದೆ
ಸಾಧನೆಯ ಶಿಖರವೇರು ಹರುಷದಲಿ
ಮುಂದಿಟ್ಟ ಹೆಜ್ಜೆಯ ಹಿಮ್ಮೆಟ್ಟ ಬೇಡ
ನಿನ್ನ ಪರಿಶ್ರಮಕೆ ದೊರಕುವುದು ಫಲ
ನಿನ್ನ ಬಾಳಾಗುವುದು ಬಂಗಾರ

- ವಾಸು (ದ್ವಿತೀಯ ಬಿ.ಎ)


ಜೀವನ

ಮುಂ ಜಾನೆಯ ಇಬ್ಬನಿಯಂತೆ
ಹಕ್ಕಿಯ ಇಂಪಾದ ಹಾಡಿನಂತೆ
ಜೇನಿನ ಸವಿಯಂತೆ
ಹೊಳೆಯುವ ನಕ್ಷತ್ರದಂತೆ
ಮುದ್ದು ಕಂದನ ನಗುವಿನಂತೆ
ಸೊಗಸಾಗಿರಲಿ ಈ ಜೀವನ ಪಯಣ
ಐಕ್ಯತೆ
ಬಾನಿನಿಂದ ಇಳಿದ ವರ್ಷಧಾರೆ
ಚಿಗುರು ತಂದಿತು ಭೂಮಿಗೆ
ನೆಲದ ತಂಪು ಗಂಥಗಾಳಿ
ಮಣ್ಣಿನ ಕಂಪ ಹೊಮ್ಮಿಸಿತು
ಕಾನನದಿ ಅರಳಿದ ಹೂವು
ಹೊಸ ಸುಗಂಧ ನೀಡಿತು ಮನಕೆ
ಭಿನ್ನ ಭಿನ್ನ ಹೃದಯದ ಮಂತ್ರ
ಏಕತೆಯನ್ನು ಸಾರಿತು ಬಾಳಿಗೆ
- ಶರಣ್ಯ
(ದ್ವಿತೀಯ ಬಿ.ಎ)


No comments: